• 20 October 2019 19:20
Jai Kannada
Jai Kannada
Blog single photo
June 13, 2019

ಮೀ ಟೂ: ನಾನಾ ಪಟೇಕರ್‌ಗೆ ಕ್ಲೀನ್ ಚಿಟ್ ನೀಡಿದ ಮುಂಬೈ ಪೊಲೀಸರು 

ಮುಂಬೈ: ನಟ ನಾನಾ ಪಟೇಕರ್ ಅವರ ವಿರುದ್ಧ ತನ್ನ ಸಹನಟಿ ತನುಶ್ರೀ ದತ್ತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಮುಂಬೈ ಪೊಲೀಸರು ಕೋರ್ಟಿಗೆ ಇಂದು ತಿಳಿಸಿದ್ದಾರೆ. 

ನಾನಾ ಪಟೇಕರ್ ಅವರು ತನ್ನ ಜತೆ 10 ವರ್ಷಗಳ ಹಿಂದೆ ಹಾರ್ನ್ ಓಕೆ ಪ್ಲೀಸ್ ಸೆಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದರು ಎಂದು ತನುಶ್ರೀ ದತ್ತಾ ಆರೋಪಿಸಿದ್ದರು.  ಪೊಲೀಸರು ಬಿ ಸಮ್ಮರಿ ವರದಿಯಲ್ಲಿ ದೂರನ್ನು ಬೆಂಬಲಿಸುವ ಯಾವುದೇ ಸಾಕ್ಷ್ಯಾಧಾರ ನಮಗೆ ಸಿಕ್ಕಿಲ್ಲ ಮತ್ತು ತನಿಖೆ ಮುಂದುವರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದರು.

ಆರೋಪಿಯ ವಿರುದ್ಧ ದೂರನ್ನು ಸಾಬೀತುಮಾಡುವ ಯಾವುದೇ ಸಾಕ್ಷ್ಯಾಧಾರ ಸಿಗದಿದ್ದಾಗ ಬಿ ಸಮ್ಮರಿ ವರದಿಯನ್ನು ಪೊಲೀಸರು ಫೈಲ್ ಮಾಡುತ್ತಾರೆ. ಈ ವಿಷಯವಾಗಿ ನಾವು ಮುಂಬೈ ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ತನುಶ್ರೀದತ್ತಾ ವಕೀಲ ತಿಳಿಸಿದ್ದಾರೆ. ನಾನಾ ಪಟೇಕರ್ ರಕ್ಷಣೆಗೆ ಪೊಲೀಸರು ನಿರ್ಲಕ್ಷ್ಯದಿಂದ ವರ್ತಿಸಿದರು ಎಂದು ಅವರು ವಾದಿಸಿದರು. ತನುಶ್ರೀ ದತ್ತಾ ಪೊಲೀಸರ ಕ್ಲೀನ್ ಚಿಟ್‌ಗೆ ಪ್ರತಿಕ್ರಿಯಿಸುತ್ತಾ, ತನಗೆ ಆಘಾತವಾಗಲಿ ಅಥವಾ ಆಶ್ಚರ್ಯವಾಗಲೀ ಆಗಿಲ್ಲ ಎಂದಿದ್ದಾರೆ.  ಭಾರತದಲ್ಲಿ ಮಹಿಳೆಯಾಗಿ ಇವೆಲ್ಲಾ ನಮಗೆ ಅಭ್ಯಾಸವಾಗಿರುವುದರಿಂದ ನನಗೆ ಆಘಾತ ಅಥವಾ ಅಚ್ಚರಿ ಉಂಟಾಗಿಲ್ಲ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.  
 

Recent Comments

Leave Comments

footer
Top