• 16 October 2018 15:29
Jai Kannada
Jai Kannada
Blog single photo
January 11, 2018

ಅಮೆರಿಕದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ಮೂಲದ ಟೆಕ್ಕಿ

 ವಾಷಿಂಗ್ಟನ್: ಭಾರತೀಯ ಮೂಲದ ಟೆಕ್ಕಿಗಳು ಅಮೆರಿಕದಲ್ಲಿ ಒಳ್ಳೆಯ ಉದ್ಯೋಗಗಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಾ ಖ್ಯಾತಿ, ಹಣವನ್ನು ಗಳಿಸಿದ್ದಾರೆ.  ಈ ಟೆಕ್ಕಿಯೂ ಕೂಡ ಅಮೆರಿಕದಲ್ಲಿ ಒಳ್ಳೆಯ ಉದ್ಯೋಗದೊಂದಿಗೆ ಐಷಾರಾಮಿ ಜೀವನ ನಡೆಸುವ ಅವಕಾಶವಿತ್ತು.

ಆದರೆ ಇವನ ಅದೃಷ್ಟ ಕೆಟ್ಟಿತ್ತೆಂದು ಕಾಣುತ್ತದೆ. ಯಾವುದೋ ಕೆಟ್ಟ ಗಳಿಗೆಯಲ್ಲಿ  ಭಾರತೀಯ ಮೂಲದ ಅಜ್ಜಿ ಮತ್ತು ಮೊಮ್ಮಗನನ್ನು ಅಪಹರಿಸಿದ್ದಲ್ಲದೇ ಹತ್ಯೆಯನ್ನೂ ಮಾಡಿ ಈಗ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾನೆ.


ರಘುನಂದನ್ ಯಂಡಮೂರಿ ಎಂಬ 32 ವರ್ಷದ ಟೆಕ್ಕಿಯೊಬ್ಬ 61 ವರ್ಷದ ಹಿರಿಯ ಮಹಿಳೆ ಮತ್ತು ಅವರ 10 ವರ್ಷ ವಯಸ್ಸಿನ ಮೊಮ್ಮಗನನ್ನು ಅಪಹರಿಸಿ, ಒತ್ತೆಹಣಕ್ಕಾಗಿ ಬೇಡಿಕೆ ಸಲ್ಲಿಸಿ ಬಳಿಕ ಅವರಿಬ್ಬರನ್ನು ಹತ್ಯೆ ಮಾಡಿದ್ದ.  ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ಮೂಲದ ಅಮೆರಿಕದ ಮೊದಲ ಕೈದಿಯಾಗಿರುವ ಇವನ ಕೊರಳಿಗೆ ಬರುವ ತಿಂಗಳು ಉರುಳು ಬೀಳುವ ಸಂಭವವಿದೆ.

ಯಂಡಮೂರಿಯ ಗಲ್ಲು ಶಿಕ್ಷೆ ದಿನಾಂಕವನ್ನು ಫೆ. 23ಕ್ಕೆ ಸ್ಥಳೀಯ ಅಧಿಕಾರಿಗಳು ನಿಗದಿ ಮಾಡಿದ್ದಾರೆ. ಆದಾಗ್ಯೂ ಪೆನ್ಸಿಲ್‌‌ವಾನಿಯಾ ಗವರ್ನರ್ ಟಾಮ್ ವುಲ್ಫ್ 2015ರಲ್ಲಿ ಮರಣದಂಡನೆಗೆ ತಾತ್ಕಾಲಿಕ ನಿಷೇಧ ಹೇರಿದ್ದರಿಂದ ಅವನಿಗೆ ಕ್ಷಮಾದಾನ ಸಿಗಬಹುದಾದ ಸಂಭವನೀಯತೆ ಕೂಡ ಇದೆ. ಯಂಡಮೂರಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೊದಲ ಭಾರತೀಯ ಅಮೆರಿಕನ್ ಪ್ರಜೆ.

 ಆಂಧ್ರಪ್ರದೇಶ ಮೂಲದ ಯಂಡಮೂರಿ ಎಚ್‌-1ಬಿ ವೀಸಾ ಮೇಲೆ ಅಮೆರಿಕಕ್ಕೆ ಬಂದಿದ್ದ. ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್‌ ಎಂಜಿನಿಯರಿಂಗ್ ಪದವೀಧರನಾದ ಇವನಿಗೆ ಮರಣದಂಡನೆ ಶಿಕ್ಷೆಗೆ ಗುರಿ ಮಾಡಿದ್ದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಲಾಗಿತ್ತು. ಈಗ ಫೆ. 23ರಂದು ಅವನು ನೇಣು ಕುಣಿಕೆಗೆ ತಲೆ ಒಡ್ಡಬೇಕಾದ ಪ್ರಸಂಗ ಒದಗಿದೆ.
 

Recent Comments

Leave Comments

footer
Top