• 23 September 2019 04:20
Jai Kannada
Jai Kannada
Blog single photo
June 11, 2019

 ನಾಪತ್ತೆಯಾದ ವಿಮಾನದ ಅವಶೇಷ ಪತ್ತೆ: 13 ಮಂದಿ ಸತ್ತಿದ್ದಾರಾ, ಬದುಕುಳಿದಿದ್ದಾರಾ? 

ನವದೆಹಲಿ: ಅರುಣಾಚಲಪ್ರದೇಶದಲ್ಲಿ ಜೂನ್ 3ರಂದು ನಾಪತ್ತೆಯಾದ, 13 ಜನರು ಪ್ರಯಾಣಿಸುತ್ತಿದ್ದ ಎನ್-32 ವಿಮಾನದ ಅವಶೇಷಗಳನ್ನು ಟಾಟೊಗೆ ಈಶಾನ್ಯದ ಲಿಪೊ ಬಳಿ 12,000 ಅಡಿ ಎತ್ತರದಲ್ಲಿ  ಐಎಎಫ್ ಮಿಗ್ 17 ಹೆಲಿಕಾಪ್ಟರ್ ಪತ್ತೆಮಾಡಿರುವುದಾಗಿ ಐಎಎಫ್ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ತಿಳಿಸಿದ್ದಾರೆ.

 ನಮ್ಮ ಮುಂದಿನ ಪ್ರಯತ್ನವು ಅವಶೇಷದ ಸ್ಥಳಕ್ಕೆ ತೆರಳಿ ವಿಮಾನದಲ್ಲಿದ್ದವರ ಸ್ಥಿತಿಗತಿಯನ್ನು ತಿಳಿಯುವುದು ಮತ್ತು ದುರದೃಷ್ಟಕರ ವಿಮಾನದ ಕಪ್ಪು ಪೆಟ್ಟಿಗೆ ಮತ್ತು ಸಿವಿಆರ್‌ ಶೋಧಿಸುವುದಾಗಿದೆ ಎಂದು ಸಿಂಗ್ ಹೇಳಿದರು. ಬಹುಶಃ ವಿಮಾನದಲ್ಲಿದ್ದ 13 ಮಂದಿ ಸಿಬ್ಬಂದಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.  

ಜೂನ್ 3ರಂದು ರಷ್ಯಾ ಮೂಲದ ಎನ್-32 ವಿಮಾನ ಅಸ್ಸಾಂ ಜೊರ್ಹಾಟ್‌ನಿಂದ ಮಧ್ಯಾಹ್ನ 12.27ಕ್ಕೆ ಅರುಣಾಚಲ ಪ್ರದೇಶದ ಶಿಯೋಮಿ ಜಿಲ್ಲೆಯ ಮೆಚುಕಾ ನೆಲೆಗೆ ಹೊರಟಿತ್ತು. ಮಧ್ಯಾಹ್ನ 1.30ಕ್ಕೆ ವಿಮಾನವು ನೆಲ ಸಿಬ್ಬಂದಿ ಜತೆಗೆ ಸಂಪರ್ಕ ಕಳೆದುಕೊಂಡಿತ್ತು. 

Recent Comments

Leave Comments

footer
Top