• 23 September 2019 04:47
Jai Kannada
Jai Kannada
Blog single photo
June 11, 2019

ಐಎಂಎ ಜಿವೆಲ್ಲರ್ಸ್ ವಂಚನೆ  ಪ್ರಕರಣ: ಠೇವಣಿ ಹಣ ವಾಪಸಿಗೆ ಗ್ರಾಹಕರ ಒತ್ತಾಯ

ಬೆಂಗಳೂರು: ಐಎಂಎ ಜಿವೆಲ್ಲರ್ಸ್‌ನಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ ಹಣವನ್ನು ವಂಚಿಸಿ ಅದರ ಮಾಲೀಕ ಮನ್ಸೂರ್ ಅಲಿ ಖಾನ್ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ನಾಯಕರು ಗೃಹಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ. ಮನ್ಸೂರ್ ಅಲಿ ಖಾನ್ ಅವರ ಹತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಬ್ಯಾಂಕ್ ಖಾತೆಗಳು ಸೀಜ್ ಆಗಿದ್ದರೂ ಒಂದೇ ದಿನದಲ್ಲಿ 2 ಕೋಟಿ ರೂ.ಗೂ ಹೆಚ್ಚು ಖಾತೆಗಳಿಗೆ ಸಂದಾಯ ಆಗಿದೆಯೆಂದು ಗೊತ್ತಾಗಿದೆ.ಐಎಂಎ ಕಂಪನಿಯ ನಾಲ್ವರು ನಿರ್ದೇಶಕರಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ನೂರಾರು ಜನರು ಇಂದು ಕೂಡ ಐಎಂಎ ಕಂಪನಿಯ ಎದುರು ಜಮಾಯಿಸಿ ತಾವು ಠೇವಣಿ ಇಟ್ಟಿದ್ದ ಹಣ ವಾಪಸು ಕೊಡಿಸುವಂತೆ ಒತ್ತಾಯಿಸಿದ್ದಾರೆ. ಸೋಮವಾರ ಕೂಡ ಐಎಂಎ ಜಿವೆಲ್ಸ್ ಕಚೇರಿ ಎದುರು ಸಾವಿರಾರು ಜನರು ಕಣ್ಣೀರು ಸುರಿಸುತ್ತಾ ತಾವು ಬಂಡವಾಳ ಹೂಡಿದ ಹಣ ವಾಪಸು ಬರುವ ಆಸೆ ಕೈಬಿಟ್ಟಿದ್ದರು.

ಅವರಲ್ಲಿ ಬಹುತೇಕ ಮಂದಿ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರಾಗಿದ್ದರು. ನಿನ್ನೆ ಮುಂಜಾನೆ ಮನ್ಸೂರ್ ಅಲಿ ಖಾನ್ ಬಿಡುಗಡೆ ಮಾಡಿದ ಆಡಿಯೊ ಕ್ಲಿಪ್‌ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನ್ಸೂರ್ ತಿಳಿಸಿದ್ದ. ಕಾಂಗ್ರೆಸ್ ಶಾಸಕ ರೋಷನ್ ಬೇಗ್ ತಮ್ಮಿಂದ 400 ಕೋಟಿ ತೆಗೆದುಕೊಂಡಿದ್ದು, ಪಕ್ಷದಲ್ಲಿ ಟಿಕೆಟ್ ಸಿಗದಿದ್ದರಿಂದ ನನ್ನ ಹಣ ಮರುಪಾವತಿ ಮಾಡಿಲ್ಲ ಎಂದು ಖಾನ್ ಆರೋಪಿಸಿದ್ದಾನೆ. ಈ ನಡುವೆ ಮನ್ಸೂರ್ ಅಲಿ ಖಾನ್ ಪೊಲೀಸರಿಗೆ ಮತ್ತು ಹೂಡಿಕೆದಾರರಿಗೆ ದಾರಿ ತಪ್ಪಿಸಲು ಆಡಿಯೊ ಸಂದೇಶನವನ್ನು ಬಿಟ್ಟು ದೇಶದಿಂದ ಪಲಾಯನ ಮಾಡಿದ್ದಾನೆಂದು ಶಂಕಿಸಿದ್ದಾರೆ.

Recent Comments

Leave Comments

footer
Top