• 17 January 2019 20:57
Jai Kannada
Jai Kannada
Blog single photo
January 11, 2018

ಐದು ಬಾರಿ ಬಾಕ್ಸಿಂಗ್ ಚಾಂಪಿಯನ್ ಈಗ ಕ್ಯಾಬ್ ಚಾಲಕ 

ಚಂಢೀಗಢ:  ಕ್ರಿಕೆಟ್‌ ಆಟಗಾರರಾಗಿ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದರೆ, ಇತರೆ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ತಮ್ಮ ಛಾಪು ಮೂಡಿಸಿದ್ದರೂ ಜೀವನ ನಿರ್ವಹಣೆಗೆ ಸಣ್ಣ, ಸಣ್ಣ ಉದ್ಯೋಗಗಳನ್ನು ಆಧರಿಸಬೇಕಾದ ಪರಿಸ್ಥಿತಿ ಬಂದಿದೆ.

 ಪಂಜಾಬ್ ಮೂಲದ ಬಾಕ್ಸರ್ ಲಖಾ ಸಿಂಗ್ ಬಾಕ್ಸಿಂಗ್‌ನಲ್ಲಿ ಐದು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದವರು, ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಪದಕವಿಜೇತ ಬಾಕ್ಸರ್ 1983ರಲ್ಲಿ ಸೇನೆಗೆ ಕೂಡ ಸೇರಿದ್ದರು. ಆದರೆ ಅಷ್ಟೆಲ್ಲಾ ಖ್ಯಾತಿ ಗಳಿಸಿದ್ದ ಬಾಕ್ಸರ್‌ ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆಗಿ 8 ಸಾವಿರ ರೂ.ಗೆ ಕೆಲಸ ನಿರ್ವಹಿಸುತ್ತಿರುವುದು ವಿಷಾದನೀಯ.

ಐದು ಬಾರಿ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರೂ ಸರ್ಕಾರ ಅವರಿಗೆ ಸೂಕ್ತ ಉದ್ಯೋಗ ಒದಗಿಸಿಕೊಟ್ಟಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

Recent Comments

Leave Comments

footer
Top