• 23 September 2019 04:31
Jai Kannada
Jai Kannada
Blog single photo
June 09, 2019

ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್‌ನಲ್ಲಿ ಪಲಾಯನ ಶಂಕೆ 

 ಮಂಗಳೂರು: ಆಫ್ರಿಕಾದ ಸೆನೆಗಲ್‌ನಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ತಪ್ಪಿಸಿಕೊಂಡಿದ್ದಾನೆಂಬ ಸುದ್ದಿ ಹರಿದಾಡುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಸೆನೆಗೆಲ್ ಪೊಲೀಸ್ ಕಸ್ಟಡಿಯಲ್ಲಿದ್ದ ರವಿ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಈ ಅವಕಾಶವನ್ನು ಬಳಸಿಕೊಂಡ ರವಿ ಪಲಾಯನ ಮಾಡಿದ್ದಾರನೆಂದು ಹೇಳಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ವಲಯದಲ್ಲಿ ಕೂಡ ಚರ್ಚಿಸಲಾಗುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಸೆನೆಗಲ್ ಸುದ್ದಿಪತ್ರಿಕೆ ಲೆ ಮಾಂಡೆ ಮತ್ತು ರಾಷ್ಟ್ರೀಯ ಹಿಂದಿ ಸುದ್ದಿ ಚಾನೆಲ್ ರವಿ ತಪ್ಪಿಸಿಕೊಂಡಿರುವ ಸುದ್ದಿಯನ್ನು ಬಹಿರಂಗಪಡಿಸಿದೆ. ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿಯಲು ಕೇಂದ್ರಸರ್ಕಾರದ ನೆರವು ಪಡೆಯಲಾಗುತ್ತದೆ. ಆ ಬಳಿಕ ಮಾತ್ರವಷ್ಟೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಸೆನೆಗಲ್‌ನಿಂದ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕಾನೂನು ಪ್ರಕ್ರಿಯೆಗಳು ಮೇ 15ರಿಂದ ಆರಂಭವಾಗಿತ್ತು. ರಾಜ್ಯ ಪೊಲೀಸರು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ರವಿ ಪೂಜಾರಿಯ ಹಸ್ತಾಂತರಕ್ಕೆ ಆದೇಶ ಪಡೆದಿದ್ದರು. ಆದರೆ ಈಗ ರವಿ ಪೂಜಾರಿ ಪರಾರಿಯಾಗಿದ್ದಾನೆಂಬ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಯತ್ನಿಸಿದ್ದಾರೆ.

Recent Comments

Leave Comments

footer
Top