• 23 September 2019 04:22
Jai Kannada
Jai Kannada
Blog single photo
June 08, 2019

ಬಿಜೆಪಿ ಕೇರಳದಲ್ಲಿ ಗೆದ್ದಿದ್ದು ಜೀರೊ, ಆದರೂ ಮೋದಿ ಕೇರಳಕ್ಕೆ ಬಂದಿದ್ಯಾಕೆ?

ತ್ರಿಚೂರು:  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇರಳದಲ್ಲಿ ತನ್ನ ಖಾತೆಯನ್ನು ತೆರೆಯದಿದ್ದರೂ ಅವರಿಲ್ಲಿ ಬಂದಿದ್ದ್ಯಾಕೆ ಎಂದು ಅನೇಕ ಜನರು ಆಶ್ಚರ್ಯ ಪಡಬಹುದು. ಆದರೆ ದೇಶವಾಸಿಗಳಲ್ಲಿ ನಾನು ಯಾವುದೇ ಭೇದಭಾವ ಎಣಿಸುವುದಿಲ್ಲ. ನನ್ನ ಕ್ಷೇತ್ರ ವಾರಾಣಸಿಯ ಜನರ ರೀತಿ ಕೇರಳದ ಜನರು ಕೂಡ ಎಂದು ಮೋದಿ ಹೇಳುವ ಮೂಲಕ ಹೃದಯವಂತಿಕೆ ಮೆರೆದರು.

ಕೇರಳ ರಾಜ್ಯವು ಬಿಜೆಪಿಗೆ ಓಟ್ ಹಾಕದಿದ್ದರೂ ಕೂಡ ವಾರಾಣಸಿಯ ರೀತಿ ನನಗೆ ಕೇರಳ ಕೂಡ ಅಚ್ಚುಮೆಚ್ಚು ಎಂದು ಮೋದಿ ಹೇಳಿದರು. ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿ ತನ್ನದೇ ಸ್ಥಾನ ಪಡೆದಿದ್ದು, ಗೆದ್ದವರಿಗೆ 130 ಕೋಟಿ ಜನರನ್ನು ಪಾಲನೆ ಮಾಡುವ ಜವಾಬ್ದಾರಿ ಇರುತ್ತದೆ. ನಮಗೆ ಮತ ಹಾಕಿ ಗೆಲ್ಲಿಸಿದವರು ಮತ್ತು ಮತ ಹಾಕದವರು ಎಲ್ಲರೂ ನಮ್ಮ ಜನರೇ,  ಎಲ್ಲರೂ ಈ ದೇಶದ ಜನರೇ ಎಂದು ಮೋದಿ ಹೇಳಿದರು.

ಬಿಜೆಪಿ ಕೇವಲ ಚುನಾವಣೆ ರಾಜಕೀಯಕ್ಕಾಗಿ ಕೆಲಸ ಮಾಡುತ್ತಿಲ್ಲ. ದೇಶದ ಪ್ರಗತಿಗೆ ಮತ್ತು ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನ ಖಾತರಿಪಡಿಸುವುದಕ್ಕೆ ಆಸಕ್ತಿ ಹೊಂದಿದೆ ಎಂದರು. 
 
 

Recent Comments

Leave Comments

footer
Top