• 23 September 2019 04:44
Jai Kannada
Jai Kannada
Blog single photo
June 08, 2019

1992ರ ವಿಶ್ವಕಪ್ ಗೆಲುವಿನ ರೀತಿಯಲ್ಲಿ ಪಾಕ್ ಆರಂಭ: ಅಭಿಮಾನಿಗಳಿಗೆ ಖುಷಿ 

2019 ರ ವಿಶ್ವಕಪ್ ಅಭಿಯಾನದಲ್ಲಿ ಸರ್ಫರಾಜ್ ಅಹ್ಮದ್ ಅವರ ಸಾರಥ್ಯದ ಪಾಕಿಸ್ತಾನದ ಆರಂಭಿಕ ಪಂದ್ಯಗಳು ಅಷ್ಟೊಂದು ಚೆನ್ನಾಗಿಲ್ಲ. ಆದರೆ ಕಾಕತಾಳೀಯವಾಗಿ ಅದು ಪಾಕಿಸ್ತಾನ 1992ರಲ್ಲಿ ಗೆದ್ದಿರುವ ವಿಶ್ವಕಪ್ ವಿಜಯಕ್ಕೆ ಪುನರಾವರ್ತನೆಯಾಗಿದೆ. ಶುಕ್ರವಾರ ಶ್ರೀಲಂಕಾ ವಿರುದ್ಧ ಪಂದ್ಯ ಮಳೆಯ ಕಾರಣದಿಂದ ರದ್ದಾಯಿತು.

ಪಾಕಿಸ್ತಾನ ಈಗ ಒಂದು ಸೋಲು, ಒಂದು ಗೆಲುವು ಮತ್ತು ಒಂದು ಡ್ರಾ ಮಾಡಿಕೊಂಡಿದೆ. 1992ರ ರೌಂಡ್ ರಾಬಿನ್ ಸುತ್ತಿನಲ್ಲಿ ಕೂಡ ಪಾಕಿಸ್ತಾನ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಸೋಲಪ್ಪಿತು. ಬಳಿಕ ಜಿಂಬಾಬ್ವೆ ವಿರುದ್ಧ ಗೆದ್ದು ಮೂರನೇ ಪಂದ್ಯವು ಮಳೆಯ ಕಾರಣದಿಂದ ರದ್ದಾಗಿತ್ತು.  ಈಗ ಕೆಲವು ಪಾಕಿಸ್ತಾನದ ಅಭಿಮಾನಿಗಳು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ, 1992ರ ವಿಶ್ವಕಪ್ ವಿಜಯವನ್ನು ಪಾಕಿಸ್ತಾನ ಪುನರಾವರ್ತಿಸುವುದರ ಸಂಕೇತ ಎಂದು ಕನಸು ಕಂಡಿದ್ದಾರೆ.

ಈಗ ಪಾಕಿಸ್ತಾನದ ಅಭಿಮಾನಿಗಳು 1992ರ ಐಸಿಸಿ ವಿಶ್ವಕಪ್ ವಿಜಯದ ಪಾಕಿಸ್ತಾನದ ಗೆಲುವಿನ ಜರ್ನಿಯನ್ನು ಪ್ರಕಟಿಸಿ ಒಳಗೊಳಗೇ ಖುಷಿ ಪಡುತ್ತಿದ್ದಾರೆ. 
 

Recent Comments

Leave Comments

footer
Top