• 23 September 2019 04:30
Jai Kannada
Jai Kannada
Blog single photo
June 07, 2019

ಆರ್‌ಬಿಐನಿಂದ ರೆಪೊ ದರ ಕಡಿತ: ಗೃಹ ಸಾಲ ಇಎಂಐ ತಗ್ಗುವ ನಿರೀಕ್ಷೆ 

ನವದೆಹಲಿ: ರಿಸರ್ವ್ ಬ್ಯಾಂಕ್ 25 ಬೇಸಿಸ್ ಪಾಯಿಂಟ್ ರೆಪೊ ರೇಟ್ ಕಡಿತವನ್ನು ಪ್ರಕಟಿಸಿದೆ. ರಿಸರ್ವ್ ಬ್ಯಾಂಕ್ ರೆಪೊ ರೇಟ್ ದರದಲ್ಲಿ ಕಡಿತ ಮಾಡುತ್ತಿರುವುದು ಇದು ಮೂರನೇ ಬಾರಿ. ರೆಪೊ ದರವು ಈಗಿನ 6.00 ಶೇಕಡದಿಂದ 5.75 ಶೇಕಡಕ್ಕೆ ಕಡಿತವಾಗಲಿದೆ. ಇದೇರೀತಿ ರಿವರ್ಸ್ ರೆಪೊ ದರವು 5.50 ಶೇಕಡಿಂದ 5.75 ಶೇಕಡಕ್ಕೆ ಕಡಿತವಾಗಿದೆ.

ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಹಿಂದಿನ ಹಣಕಾಸು ನೀತಿ ಪರಾಮರ್ಶೆಗಳಲ್ಲಿ ಕೇಂದ್ರ ಬ್ಯಾಂಕ್ ರೆಪೊ ದರವನ್ನು ಒಟ್ಟು 75 ಬೇಸಿಸ್ ಪಾಯಿಂಟ್ ತಗ್ಗಿಸಿತ್ತು. ರೇಪೊ ದರ ಇಳಿಸಿದ್ದು, ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿಯಾಗಿದ್ದು, ಅವರ ಸಮಾನ ಮಾಸಿಕ ಕಂತುಗಳ(ಇಎಂಐ) ಪಾವತಿ ಮೊತ್ತ  ಕಡಿಮೆಯಾಗುವ ಸಾಧ್ಯತೆಯಿದೆ.

ಕಳೆದ 2 ಬಾರಿ ರಿಸರ್ವ್ ಬ್ಯಾಂಕ್ ರೆಪೊ ದರ ತಗ್ಗಿಸಿದ್ದರೂ ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಇಎಂಐ ತಗ್ಗಿಸಿರಲಿಲ್ಲ. ಆದರೆ ಈ ಬಾರಿ ಬ್ಯಾಂಕುಗಳು ಗೃಹಸಾಲ ಮತ್ತಿತರ ಸಾಲಗಳ ಮೇಲಿನ ಇಎಂಐ ತಗ್ಗಿಸಬಹುದೆಂದು ನಿರೀಕ್ಷಿಸಲಾಗಿದೆ.

Recent Comments

Leave Comments

footer
Top