• 16 October 2018 16:04
Jai Kannada
Jai Kannada
Blog single photo
January 10, 2018

ಹೊಸ ಟ್ವಿಸ್ಟ್ ಪಡೆದ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ

ಚಿಕ್ಕಮಗಳೂರು: ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆಕೆ ಸಾಯುವುದಕ್ಕೆ ಮುಂಚೆ ತೀವ್ರ ಖಿನ್ನತೆಗೊಳಗಾಗಿ 3 ದಿನಗಳ ಕಾಲ ಏನನ್ನೂ ತಿನ್ನದೇ ಖಾಲಿ ಹೊಟ್ಟೆಯಲ್ಲಿ ಇದ್ದಿದ್ದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ತಿಳಿಸಿದ್ದಾರೆ.

ಧನ್ಯಶ್ರೀ ಮನೆಗೆ ಒಂದು ಸಂಘಟನೆಗೆ ಸೇರಿದವರು ಎರಡು ಬಾರಿ ಹೋಗಿ ಬಂದಿದ್ದರು. ಅವಾಚ್ಯ ಶಬ್ದಗಳಲ್ಲಿ ಧನ್ಯಶ್ರೀ ಮತ್ತು ತಾಯಿಯನ್ನು ನಿಂದಿಸಿದ್ದರು. ಆಗ ಅವರನ್ನು ಧೈರ್ಯವಾಗಿ ಎದುರಿಸಿದ್ದ ಧನ್ಯಶ್ರೀ 5ನೇ ತಾರೀಖು ಐವರು ಎರಡು ಬಾರಿ ಮನೆಗೆ ಬಂದುಹೋದ ಮೇಲೆ ತೀವ್ರ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ಧನ್ಯಶ್ರೀ ತಂದೆಯಿಂದ ತಪ್ಪಾಗಿ ದೂರು ನೀಡುವಂತೆ ಮಾಡಿದವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಧನ್ಯಶ್ರೀ ಜತೆ ವಾಟ್ಸಾಪ್ ಚಾಟ್ ಮಾಡಿದ ವ್ಯಕ್ತಿಯ ನಿಜ ನಾಮಧೇಯ ಸಂತೋಷ್ ಅಲ್ಲ ಎಂದು ಅಣ್ಣಾಮಲೈ ಬಹಿರಂಗಮಾಡಿದ್ದಾರೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಮೇಲಿನವರಿಂದ ಎಷ್ಟೇ ಒತ್ತಡ ಬಂದರೂ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ಅಣ್ಣಾಮಲೈ ಹೇಳಿದರು.

Recent Comments

Leave Comments

footer
Top