• 08 April 2020 05:17
Jai Kannada
Jai Kannada
Blog single photo
June 04, 2019

ಮಾರಣಾಂತಿಕ ರೋಗದ ಸುಳಿಯಿಂದ ಪಾರಾದ ಸುಶ್ಮಿತಾ ಸೇನ್

ನವದೆಹಲಿ: ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ಸದಾ ಸೃಜನಶೀಲ ಮತ್ತು ಸೊಗಸಾದ ವ್ಯಕ್ತಿತ್ವದ ಸೆಲಿಬ್ರಿಟಿಯೆಂದು ಹೆಸರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಬಳಿಕ ಬಿ-ಟೌನ್ ನಟಿಯಾಗಿ ಮಿಲಿಯಾಂತರ ಜನರ ಹೃದಯಕ್ಕೆ ಲಗ್ಗೆ ಇಟ್ಟಿದ್ದರು. ಆದರೆ ಕೆಲವು ವರ್ಷಗಳಿಂದ ಅವರು ಚಿತ್ರದ ಸನ್ನಿವೇಶಗಳಿಂದ ದೂರವಿದ್ದಾರೆ.

ಬಾಲಿವುಡ್‌ಲೈಫ್.ಕಾಂ ನ ರಾಜೀವ್ ಮಸಂದ್ ಸುಶ್ಮಿತಾ ಜತೆ ಸಂದರ್ಶನದಲ್ಲಿ ಜೀವನ, ಚಿತ್ರಗಳು ಮತ್ತು ಇನ್ನೂ ಹೆಚ್ಚಿನ ವಿಷಯಗಳನ್ನು ಬಿಚ್ಚಿಟ್ಟರು. ಅದೇ ಸಂದರ್ಶನದಲ್ಲಿ ಸುಶ್ಮಿತಾ ತಾವು ಎದುರಿಸಿದ ಜೀವಬೆದರಿಕೆಯ ರೋಗದ ಬಗ್ಗೆ ಕೂಡ ಬಿಚ್ಚಿಟ್ಟರು.  2014ರಲ್ಲಿ ಸುಶ್ಮಿತಾ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಒಯ್ದಾಗ ಸುಶ್ಮಿತಾಳ ಅಡ್ರೆನಲ್ ಗ್ರಂಥಿಗಳು ಮುಖ್ಯ ಹಾರ್ಮೋನ್ ಕಾರ್ಟಿಸಾಲ್ ತಯಾರಿಕೆಯನ್ನು ನಿಲ್ಲಿಸಿದ್ದನ್ನು ವೈದ್ಯರು ಪತ್ತೆಹಚ್ಚಿದರು. ನಟಿ ಅಡ್ರೆನಲ್ ಬಿಕ್ಕಟ್ಟಿಗೆ ಒಳಪಟ್ಟಿದ್ದು, ಬಹುಅಂಗಾಂಗ ವೈಫಲ್ಯಕ್ಕೆ ಎಡೆಯಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ನಟಿ ಪ್ರಾಣಾಪಾಯದಿಂದ ಪಾರಾದರು.

ಈ ಕುರಿತು ತಿಳಿಸಿದ ಸುಶ್ಮಾ ತಾವು ಅದಕ್ಕಾಗಿ ಇನ್‌ಸ್ಟಾಂ ಪುಟವನ್ನು ತೆರೆದಿದ್ದಾಗಿ ತಿಳಿಸಿದರು. ನಾನು ತುಂಬಾ ಅನಾರೋಗ್ಯಕ್ಕೀಡಾಗಿ ತಲೆಕೂದಲು ಉದುರಲಾರಂಭಿಸಿತು. ಈ ಸಮಯದಲ್ಲಿ ಯೋಚನೆಯೊಂದು ನನ್ನನ್ನು ಬಾಧಿಸಿತು. ಇದು ನನ್ನನ್ನು ಕೊಲ್ಲುವುದಾದರೆ, ನಾನು ಯಾರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದ್ದರಿಂದ ಒಂದು ರಾತ್ರಿ ನಾನು ಇನ್‌ಸ್ಟಾಗ್ರಾಂ ಪುಟ ತೆರೆದಿದ್ದಾಗಿ ತಿಳಿಸಿದರು.

2016ರಲ್ಲಿ ಮಾರಕ ಕಾಯಿಲೆ ವಿರುದ್ಧ ಕಠಿಣ ಹೋರಾಟ ಮಾಡಿದ ಬಳಿಕ, ನಟಿ ಚೇತರಿಸಿಕೊಂಡರು. ಸುಶ್ಮಾಳನ್ನು ಪುನಃ ಆಸ್ಪತ್ರೆಗೆ ಸೇರಿಸಿದ್ದಾಗ ಸುಶ್ಮಾರ ದೇಹ ಅದೇ  ಕಾರ್ಟಿಸಾಲ್ ಹಾರ್ಮೋನ್ ತಯಾರಿಕೆ ಆರಂಭಿಸಿದ್ದು ಬೆಳಕಿಗೆ ಬಂದ ಮೇಲೆ ಸ್ಟೆರಾಯ್ಡ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು.

Recent Comments

Leave Comments

footer
Top