• 23 September 2019 04:47
Jai Kannada
Jai Kannada
Blog single photo
June 04, 2019

 ಇಂಗ್ಲೆಂಡ್ ವಿರುದ್ಧ ಗೆದ್ದು ಶಾಕ್ ನೀಡಿದ ಪಾಕಿಸ್ತಾನ 

ವಿಶ್ವ ಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲನುಭವಿಸಿದ ಪಾಕಿಸ್ತಾನ ಇಂಡ್ ವಿರುದ್ಧ ಪಂದ್ಯದಲ್ಲಿ ಪುಟಿದೆದ್ದು ವಿಜಯ ಸಾಧಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದೆ. ಪಾಕಿಸ್ತಾನದ ಬೃಹತ್ ಸ್ಕೋರಾದ 349 ರನ್‌ಗಳಿಗೆ ಪ್ರತ್ಯುತ್ತರವಾಗಿ ಜೋಯಿ ರೂಟ್ (107) ಮತ್ತು ಜೋಸ್ ಬಟ್ಲರ್ (103) ರನ್ ಶತಕಗಳು ಕೂಡ ವ್ಯರ್ಥವಾಗಿ  ಪಾಕಿಸ್ತಾನ ಇಂಗ್ಲೆಂಡ್ ತಂಡವನ್ನು 14 ರನ್‌ಗಳಿಂದ ಸೋಲಿಸಿ 2019 ವಿಶ್ವಕಪ್ ಪ್ರಥಮ ಜಯವನ್ನು ಸಾಧಿಸಿತು.

11 ಏಕದಿನ ಪಂದ್ಯಗಳ ಸತತ ಸೋಲುಗಳಿಂದ ಜರ್ಜರಿತವಾಗಿದ್ದ ಪಾಕಿಸ್ತಾನ ವಾಹಬ್ ರಿಯಾಜ್(3/82) ಮತ್ತು ಶದಬ್ ಖಾನ್( 2/63) ಅವರ ಉತ್ತಮ ಬೌಲಿಂಗ್ ನೆರವಿನಿಂದ ಜಯಗಳಿಸಲು ಯಶಸ್ವಿಯಾಯಿತು. ಆರಂಭಿಕ ಪಂದ್ಯದಲ್ಲಿ 7 ವಿಕೆಟ್‌ಗಳಿಂದ 105 ರನ್‌ಗಳಿಗೆ ಕುಸಿದು ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲನುಭವಿಸಿದ ಪಾಕಿಸ್ತಾನಕ್ಕೆ ಇಂಗ್ಲೆಂಡ್ ವಿರುದ್ಧ ಜಯವು ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಪಾಕಿಸ್ತಾನದ ಕಡೆ ಮಹಮ್ಮದ್ ಹಫೀಜ್ 84 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದಲ್ಲಿ ಇಮಾಮ್ ಉಲ್ ಹಕ್ 44, ಬಾಬರ್ ಅಜಮ್ 63, ಮೊಹ್ಮದ್ ಹಫೀಜ್ 84, ಸಫ್ರಾಜ್ ಅಹ್ಮದ್ 55 ರನ್‌ಗಳನ್ನು ಗಳಿಸಿ ಪಾಕಿಸ್ತಾನ ಒಟ್ಟು 8 ವಿಕೆಟ್‌ಗಳಿಗೆ 349 ರನ್ ಗಳಿಸಿತು.  ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಮತ್ತು ಮೊಯಿನ್ ಅಲಿ ತಲಾ 3 ವಿಕೆಟ್ ಕಬಳಿಸಿದರು. ಜೋಯಿ ರೂಟ್ ಮತ್ತು ಜೋಸ್ ಬಟ್ಲರ್ ಅವರ ಶತಕಗಳ ನಡುವೆಯೂ ಇಂಗ್ಲೆಂಡ್ ತಂಡದಲ್ಲಿ ಜತೆಯಾಟದ ಕೊರತೆಯಿಂದ ಪಾಕಿಸ್ತಾನದ ಸ್ಕೋರ್ ಗಡಿ ದಾಟಲು ವಿಫಲವಾಯಿತು.  ಶದಾಬ್ ಖಾನ್ 2 , ಮೊಹ್ಮದ್ ಅಮೀರ್ 2 ಮತ್ತು ವಹಾಬ್ ರಿಯಾಜ್ 3 ವಿಕೆಟ್ ಗಳಿಸಿದರು. 

Recent Comments

Leave Comments

footer
Top