• 23 September 2019 04:45
Jai Kannada
Jai Kannada
Blog single photo
June 04, 2019

ಕೊಲೆಯ ನಿಗೂಢತೆಯನ್ನು ಬೇಧಿಸಿದ ಸಿಗರೇಟ್ ಲೈಟರ್

ಲಿಲ್ಲೆ, ಫ್ರಾನ್ಸ್: ಫ್ರೆಂಚ್ ಪೊಲೀಸರು ಸೋಮವಾರ ಉತ್ತರ ಫ್ರಾನ್ಸ್ ರಸ್ತೆಬದಿಯಲ್ಲಿ ಗೋಣಿಚೀಲವೊಂದರೊಳಗೆ ಹುದುಗಿಸಿಟ್ಟಿದ್ದ ದೇಹವನ್ನು ಪತ್ತೆಮಾಡಿದ್ದರು. ಆ ದೇಹದ ಗುರುತು ಸಿಗದೇ ಕೊಲೆಯ ನಿಗೂಢತೆಯನ್ನು ಭೇದಿಸುವುದು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ ಮೃತದೇಹದ ಜೇಬಿನಲ್ಲಿದ್ದ ಸಿಗರೇಟ್ ಲೈಟರ್‌ವೊಂದರ ನೆರವಿನಿಂದ ಪೊಲೀಸರಿಗೆ ಸುಳಿವು ಸಿಕ್ಕಿ ಬೆಲ್ಜಿಯಂನಲ್ಲಿ ಕೊಲೆ ಆರೋಪಿಯಾಗಿದ್ದ ಇನ್ನೊಬ್ಬ ಭಾರತೀಯನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

 ಕಳೆದ ಅಕ್ಟೋಬರ್‌ನಲ್ಲಿ ಮೆಷಿನ್ ಆಪರೇಟರ್ ಒಬ್ಬರು ಬೋರ್ ಬೋರ್ಗ್ ಎಂಬಲ್ಲಿ ಹೊಂಡವೊಂದನ್ನು ಸ್ವಚ್ಛಗೊಳಿಸುತ್ತಿದ್ದಾಗ ಗೋಣಿಚೀಲದಲ್ಲಿ ಹುದುಗಿಸಿಟ್ಟಿದ್ದ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿತ್ತು. ಆದರೆ ಸಾವಿನ ಸಂದರ್ಭಗಳನ್ನು, ರಾಷ್ಟ್ರೀಯತೆ ಮುಂತಾದವನ್ನು ಗುರುತಿಸಲು ಯಾವುದೇ ಸೆಲ್ ಫೋನ್, ದಾಖಲೆ ಮತ್ತಿತರ ವಸ್ತುಗಳು ಸಿಕ್ಕಿರಲಿಲ್ಲ. ಡಿಎನ್‌ಎ ಮತ್ತು ಬೆರಳಚ್ಚುಗಳಿಂದ ಕೂಡ ಮೃತನ ಗುರುತು ಪತ್ತೆ ಮಾಡುವಲ್ಲಿ ವಿಫಲವಾಗಿತ್ತು. ಆದರೆ ಮೃತನ ಜೇಬಿನಲ್ಲಿದ್ದ 'ಕ್ರೊಯೆಗ್ ಕೆಫೆ' ಎಂಬ ಹೆಸರಿದ್ದ ಸಿಗರೇಟ್ ಲೈಟರ್ ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ನೆರವಾಯಿತು.

ಬೆಲ್ಜಿಯನ್‌ನ ಫೆಡರಲ್ ಪೊಲೀಸರಿಗೆ ಇದರಿಂದ ಮೃತನ ಗುರುತನ್ನು ಪತ್ತೆಹಚ್ಚಲು ಸಾಕ್ಷ್ಯ ಸಿಕ್ಕಿತ್ತು. ಬೆಲ್ಜಿಯಂ ಪೊಲೀಸರು ಕಳೆದ ಜೂನ್‌ನಿಂದ ಕಾಣೆಯಾಗಿದ್ದ ಭಾರತೀಯ ಪೌರ 42 ವರ್ಷ ವಯಸ್ಸಿನ ದರ್ಶನ್ ಸಿಂಗ್ ಎಂಬವನಿಗೆ ಹುಡುಕಾಟ ನಡೆಸಿದ್ದರು. ಲೈಟರ್ ಮೇಲಿದ್ದ ಕ್ರೊಯೆಗ್ ಕೆಫೆ ಹೆಸರಿನ ಲೈಟರ್ ಖರೀದಿಸಿದ ಅಂಗಡಿಯು ಡಚ್ ಗಡಿಗೆ ಸಮೀಪದ ರಾವೆಲ್ಸ್‌ನಲ್ಲಿ ಮೃತನ ಮನೆಯ ಬಳಿಯೇ ಇರುವುದನ್ನು ಪತ್ತೆಹಚ್ಚಲಾಯಿತು. ನಾಪತ್ತೆಯಾಗಿದ್ದ ದರ್ಶನ್ ಸಿಂಗ್ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಬೆಲ್ಜಿಯನ್ ಅಧಿಕಾರಿಗಳು ತನಿಖೆ ಮರುಆರಂಭಿಸಿ ಹತ್ಯೆಗೆ ಸಂಬಂಧಿಸಿದಂತೆ ಇನ್ನೊಬ್ಬ ಭಾರತೀಯ ಪೌರನನ್ನು ಶಂಕೆಯ ಆಧಾರದ ಮೇಲೆ ಬಂಧಿಸಿ ತನಿಖೆಗೆ ಒಳಪಡಿಸಿದಾಗ ಅವನು ತಪ್ಪೊಪ್ಪಿಕೊಂಡಿದ್ದ.  ಆದರೆ ಹತ್ಯೆಗೆ ಪ್ರೇರಣೆ ಏನೆಂಬ ಹೆಚ್ಚಿನ ವಿವರಗಳನ್ನು ಮೂಲಗಳು ತಿಳಿಸಿಲ್ಲ.
 

Recent Comments

Leave Comments

footer
Top