Jai Kannada
Jai Kannada
Blog single photo
January 10, 2018

ರಾಜ್ಯ ಸರ್ಕಾರ ಎಂಜಿನ್ ತೆಗೆದ ರೈಲು: ಅಮಿತ್ ಶಾ 

ಕೇಂದ್ರ ಸರ್ಕಾರದ ವಿರುದ್ಧ ಮಲತಾಯಿ ಧೋರಣೆಯ ಆರೋಪಕ್ಕೆ ಉತ್ತರಿಸಲು ಬಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಸಮಾವೇಶದಲ್ಲಿ  ಭಾಷಣ ಮಾಡುತ್ತಾ ಹೇಳಿದರು.

 ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ 2 ಲಕ್ಷ 18 ಕೋಟಿ ರೂ. ರಾಜ್ಯಕ್ಕೆ ನೀಡಿದೆ. ಹಿಂದಿನ ಯುಪಿಎ ಸರ್ಕಾರ ರಾಜ್ಯಕ್ಕೆ ನೀಡಿದ ಹಣಕ್ಕಿಂತ ಅದು ಹೆಚ್ಚಾಗಿದೆ. ಇದು ಮಲತಾಯಿ ಧೋರಣೆಯೇ ಎಂದು ಅಮಿತ್ ಶಾ ಪ್ರಶ್ನಿಸಿದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ  ಆ ಹಣವೆಲ್ಲಾ ನಿಮಗೆ ತಲುಪಿದೆಯೇ ಎಂದು ಶಾ ಪ್ರಶ್ನಿಸಿದರು.

ರಾಜ್ಯದಲ್ಲಿ  ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಕಿತ್ತು ಬಿಸಾಡಲಿದೆ ಎಂದು ವಿಶ್ವಾಸದಿಂದ ನುಡಿದರು. ರೈಲಿನ ಎಂಜಿನ್ ತೆಗೆದರೆ ರೈಲು ಮುಂದೆ ಹೋಗುತ್ತದೆಯೇ ಅದೇ ರೀತಿ ರಾಜ್ಯಸರ್ಕಾರ ಅಭಿವೃದ್ಧಿಯನ್ನು ನಿಲ್ಲಿಸಿರುವುದರಿಂದ ರಾಜ್ಯ ಮುಂದೆ ಹೋಗುತ್ತಿಲ್ಲ ಎಂದು ಶಾ ಆರೋಪಿಸಿದರು. 

ಮೂರು ವರ್ಷದಲ್ಲಿ ಬಿಜೆಪಿ, ಆರ್‌ಎಸ್ಸೆಸ್‌ನ 23 ಜನರ ಹತ್ಯೆಯಾಗಿದೆ ಅಮಿತ್ ಶಾ ತಿಳಿಸಿದರು. ಆದರೆ ಇದುವರೆಗೆ ಬಂಧಿಸಲು ಸಾಧ್ಯವಾಗಿಲ್ಲ. ದೇವಸ್ಥಾನದ ಅರ್ಚಕರಿಗೆ ಸರಿಯಾಗಿ ವೇತನ ನೀಡ್ತಿಲ್ಲ ಎಂದೂ ಅವರು ಆರೋಪಿಸಿದ್ದಾರೆ. ಆದರೆ ಗಣಪತಿ ಹಬ್ಬಕ್ಕೆ ಮಾತ್ರ ಸರ್ಕಾರ 10 ಲಕ್ಷ ಬಾಂಡ್ ಪಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.


ಸಿದ್ದಹೊಳಲ್ಕೆರೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

 ಚಿತ್ರದುರ್ಗ ನಗರದಲ್ಲಿ ಮುಂಚೆ ಸಮಾವೇಶ ನಡೆಸಲಾಗುತ್ತಿತ್ತು. ಆದರೆ ಹೊಳಲ್ಕೆರೆ ಪಟ್ಟಣದಲ್ಲಿ ಸಮಾವೇಶ ನಡೆಸಿರುವುದು ಹೊಳಲ್ಕೆರೆ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ.  

Recent Comments

Leave Comments

footer
Top