• 16 October 2018 15:46
Jai Kannada
Jai Kannada
Blog single photo
January 10, 2018

 ತನ್ವಿರ್ ಸೇಠ್‌ಗೆ 10 ಕೋಟಿ ರೂ. ಕೊಡುವಂತೆ ಜೀವಬೆದರಿಕೆ ಕರೆ 

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಒಂದು ವಾರದಲ್ಲಿ 10 ಕೋಟಿ ರೂ. ತಂದುಕೊಡು ಇಲ್ಲದಿದ್ದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲ ಎಂದು ಭೂಗತಪಾತಕಿ ರವಿಪೂಜಾರ್  ಕಡೆಯವರು ಧಮ್ಕಿ ಹಾಕಿದ್ದಾರೆ

. ನಿನ್ನೆ ಸಂಜೆ ಅನಾಮಧೇಯ ನಂಬರ್‌ನಿಂದ ಜೀವಬೆದರಿಕೆ ಕರೆ ಮಾಡಲಾಗಿತ್ತು. ಈ ವಿಷಯ ಕುರಿತು ತನ್ವೀರ್ ಸೇಠ್ ಸಿಎಂ ಹಾಗೂ ಗೃಹಸಚಿವರ ಗಮನಕ್ಕೆ ತಂದಿದ್ದಾರೆ.

ಭೂಗತಪಾತಕಿಗಳು ಶ್ರೀಮಂತ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ವಿದೇಶದಿಂದಲೇ ಜೀವಬೆದರಿಕೆ ಕರೆ ಮಾಡಿ ಹಣ ನೀಡದಿದ್ದರೆ ಅವರ  ಸ್ಥಳೀಯ ಗ್ಯಾಂಗ್‌ಸ್ಟರ್‌ಗಳ ಮೂಲಕ ಹತ್ಯೆ ನಡೆಸಿದ ಉದಾಹರಣೆಗಳಿವೆ. 

Recent Comments

Leave Comments

footer
Top