• 17 January 2019 21:06
Jai Kannada
Jai Kannada
Blog single photo
January 09, 2018

ಚುನಾವಣೆ ಬಿಸಿನೆಸ್ ಇದ್ದಂತೆ: ಅಮಿತ್ ಶಾ ಪಾಠ 

ಬೆಂಗಳೂರು: ಚುನಾವಣೆ ನನಗೆ ಬಿಸಿನೆಸ್ ಇದ್ದ ಹಾಗಿದ್ದು, ಬಿಸಿನೆಸ್ ರೀತಿ ಚುನಾವಣೆಯನ್ನು ನಿಭಾಯಿಸಿ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಸ್ತುವಾರಿ ಹಾಗೂ ಸಂಚಾಲಕರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಮೇಲಿನ ಎಚ್ಚರಿಕೆ ನೀಡಿದ್ದಾರೆ. ನಾನು ಬಿಸಿನೆಸ್ ರೀತಿಯಲ್ಲಿ ಚುನಾವಣೆಯನ್ನು ಹ್ಯಾಂಡಲ್ ಮಾಡುತ್ತೇನೆ. ನೀವು ಕೂಡ ಬಿಸಿನೆಸ್ ರೀತಿಯಲ್ಲಿ ಹ್ಯಾಂಡಲ್ ಮಾಡಬೇಕು ಎಂದು ಅಮಿತ್ ಶಾ ಹೇಳಿದರು.

ಒಂದು ವ್ಯವಹಾರದ ರೀತಿ ಹ್ಯಾಂಡಲ್ ಮಾಡಿದಾಗ ನೀವು ಯಶಸ್ವಿಯಾಗುತ್ತೀರಿ ಎಂದು ಹೇಳಿದ್ದಾರೆ.
ಸುರೇಶ್ ಅಂಗಡಿಗೆ ಖಡಕ್ ಉತ್ತರ 
ನಮಗೆ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಉಸ್ತುವಾರಿ ನೀಡಿ ಎಂದು ಸಂಸದ ಸುರೇಶ್ ಅಂಗಡಿ ಕೇಳಿದ್ದರು. ದೂರದ ಕ್ಷೇತ್ರಗಳ ಉಸ್ತುವಾರಿ ಬೇಡ ಎಂದಿದ್ದರು ಆಗ ಅಮಿತ್ ಶಾ ನಿಮಗೆ ದೂರದ ಕ್ಷೇತ್ರಗಳು ಕಷ್ಟವಾದರೆ ಆರಾಮವಾಗಿರಿ ಎಂದು ಖಡಕ್ ಆಗಿ ಹೇಳಿದ್ದಾರೆ.

ನೀವು ಬಿಟ್ಟರೆ ನೂರಾರು ಜನ ಕಾಯುತ್ತಾ ಇದ್ದಾರೆ ಎಂದು ಅದೇ ಸಂದರ್ಭದಲ್ಲಿ ಅಮಿತ್ ಶಾ ಹೇಳಿದರು.

Recent Comments

Leave Comments

footer
Top