• 23 September 2019 04:25
Jai Kannada
Jai Kannada
Blog single photo
May 24, 2019

 ಎಕ್ಸಿಟ್ ಮೋಡ್‌ನಲ್ಲಿರುವ ಒಂದು ವರ್ಷ ವಯಸ್ಸಿನ ದೋಸ್ತಿ ಸರ್ಕಾರ 

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಲೋಕಸಭೆಯಲ್ಲಿ ಹೀನಾಯ ಸೋಲಿನಿಂದ ಒಂದು ವರ್ಷ ವಯಸ್ಸಿನ ಸಮ್ಮಿಶ್ರಸರ್ಕಾರವನ್ನು ಎಕ್ಸಿಟ್ ಮೋಡ್‌ನಲ್ಲಿ ಇರಿಸಿದೆ. 28 ಸೀಟುಗಳ ಪೈಕಿ 25ರಲ್ಲಿ ಅಚ್ಚರಿಯ ಗೆಲುವು ಗಳಿಸಿದ ಬಿಜೆಪಿ  ಉಪಚುನಾವಣೆಯಲ್ಲಿ ಇನ್ನೊಂದು ಸ್ಥಾನ ಗೆಲ್ಲುವ ಮೂಲಕ ಅಸೆಂಬ್ಲಿಯಲ್ಲಿ 105 ಸೀಟುಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದೆ. 224 ಸದಸ್ಯ ಬಲದಲ್ಲಿ ಸರಳಬಹುಮತಕ್ಕೆ ಅದಕ್ಕೆ 113 ಸೀಟುಗಳ ಅಗತ್ಯವಿದೆ.

ಭಿನ್ನಮತದಿಂದ ಜರ್ಜರಿತವಾದ ಕುಮಾರಸ್ವಾಮಿ ಸರ್ಕಾರ ಬೀಳುವುದು ಸನ್ನಿಹಿತ-ಆದರೆ ಯಾವಾಗ ಎನ್ನುವುದೇ ಪ್ರಶ್ನೆಯಾಗಿದೆ. ಸರ್ಕಾರವನ್ನು ಮುಂದುವರೆಸುವ ಕುರಿತು ಕಾಂಗ್ರೆಸ್-ಜೆಡಿಎಸ್ ನಿರ್ಧಾರಕ್ಕೆ ನಾವು 2 ದಿನಗಳವರೆಗೆ ಕಾಯುತ್ತೇವೆ. ಅವರು ಏನೂ ಮಾಡದಿದ್ದರೆ ನಾವು ಕಣಕ್ಕೆ ಇಳಿಯುತ್ತೇವೆ ಎಂದು ವಿಜಯದ ಗುಂಗಿನಲ್ಲಿದ್ದ ಯಡಿಯೂರಪ್ಪ ಹೇಳಿದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಕಳೆದ ಬಾರಿ ಗಳಿಸಿದ 11 ಸೀಟುಗಳಿಗಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಎರಡು ಪಕ್ಷಗಳ ಕಾರ್ಯಕರ್ತರ ನೆಲೆಯಲ್ಲಿ ಸಂಯೋಜನೆಯ ಕೊರತೆ ಜತೆಗೆ ಮೋದಿ ಅಲೆ ಸೇರಿಕೊಂಡು ಸಮ್ಮಿಶ್ರ  ಲೆಕ್ಕಾಚಾರ ದಿಕ್ಕು ತಪ್ಪಿತು.
ಈಗ ಸರ್ಕಾರವನ್ನು ಉಳಿಸಲು ಎಲ್ಲಾ ಸಾಧ್ಯವಾದ ಪ್ರಯತ್ನ ಮಾಡಲಾಗುತ್ತಿದೆ. ದೇವೇಗೌಡ, ಕುಮಾರಸ್ವಾಮಿ ಮತ್ತು ದಿನೇಶ್ ಗುಂಡೂರಾವ್ ಸರ್ಕಾರವನ್ನು ಉಳಿಸುವ ಯೋಜನೆ ರೂಪಿಸಿದ್ದು, ಕಾಂಗ್ರೆಸ್ ಒಂದು ಪರ್ಯಾಯವನ್ನು ಮಂಡಿಸಿದೆ.

ಕುಮಾರಸ್ವಾಮಿ  ಕುಮಾರಸ್ವಾಮಿ ಬದಲಿಗೆ ಕಾಂಗ್ರೆಸ್‌ನ ದಲಿತ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿಸಿ, ಜೆಡಿಎಸ್‌ಗೆ ಬಹುಶಃ ರೇವಣ್ಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು.   ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆಂಬ ಊಹಾಪೋಹಗಳ ನಡುವೆ, ಜೆಡಿಎಸ್ ಸೋಲನ್ನು ಒಪ್ಪಿಕೊಳ್ಳಲು ತಯಾರಾಗಿಲ್ಲ. ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆದು ಸರ್ಕಾರ ಉರುಳಿಸುವ ತನಕ ಅಥವಾ ಹಠಾತ್ ಮಧ್ಯಂತರ ಚುನಾವಣೆವರೆಗೆ ಅದು ಕಾಯಲಿದೆ. ಆದರೆ ಕಳೆದ ವರ್ಷ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸಿದ್ದ ಯಡಿಯೂರಪ್ಪ ಈಗ ಏನೂ ಮಾಡದೇ ಸುಮ್ಮನಿದ್ದಾರೆ. ನಾವಾಗೇ ಸರ್ಕಾರವನ್ನು ಉರುಳಿಸಿದ ಅಪವಾದ ಹೊರುವುದಕ್ಕಿಂತ ಅನೇಕ ಅತೃಪ್ತ ಶಾಸಕರು ತಾವಾಗೇ ಬಿಜೆಪಿಗೆ ಪಕ್ಷಾಂತರಗೊಂಡರೆ ಸರ್ಕಾರ ಅದಾಗದೇ ಉರುಳುತ್ತದೆಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

Recent Comments

Leave Comments

footer
Top