• 20 January 2018 12:53
Jai Kannada
Jai Kannada
Blog single photo
January 09, 2018

ಕಟ್ಟುಮಸ್ತಾದ ದೇಹದ ಜೂಲಿ ಮಸಲ್ ಬಾರ್ಬಿ

ಈ ಯುವತಿಯ ಮುಖ ನೋಡಿದಾಗ ಏನೆನ್ನಿಸಬಹುದು. ಸುಂದರವಾಗಿ ಕಲ್ಲಿನಲ್ಲಿ ಕಡೆದಿರುವ ಮುಖದಂತೆ ಗೋಚರಿಸುವುದಿಲ್ಲವೇ. ಕ್ಯೂಟ್ ಮತ್ತು ಪ್ರಿಟಿ ಎಂದು ನಿಮ್ಮ ಮನಸ್ಸಿನಲ್ಲಿ ಭಾವನೆಗಳು ಉಂಟಾಗಬಹುದು.

ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಈ ಯುವತಿ ಮುಖ ಸುಂದರವಾಗಿದ್ದರೂ ದೇಹ ಮಾತ್ರ ವ್ಯಾಯಾಮದಿಂದ ಹುರಿಗೊಳಿಸಿದ ಪುರುಷನ ದೇಹದಂತಿದೆ. ಯುವತಿ ಜೂಲಿಯ ಕಟ್ಟುಮಸ್ತಾದ ಜಿಮ್ ಬಾಡಿಯಿಂದಾಗಿ ಅವಳು ಮಸಲ್ ಬಾರ್ಬೀ ಎಂದು ಜನಪ್ರಿಯಳಾಗಿದ್ದಾಳೆ.


ಸಾಮಾಜಿಕ ಜಾಲತಾಣದಲ್ಲಿ ಜೂಲಿ ಚಿತ್ರ ವೈರಲ್ ಆದ ಕೂಡಲೇ ಅನೇಕ ಮಂದಿ ಅದರ ಸತ್ಯಾಸತ್ಯತೆ ಕುರಿತು ಅನುಮಾನ ವ್ಯಕ್ತಪಡಿಸಿದರು. ಅದು ನಕಲಿ ಅಥವಾ ಬದಲಿಸಿದ ಚಿತ್ರವಿರಬಹುದೆಂದು ಭಾವಿಸಿದರು.
 ಜೂಲಿಯಾ 15ನೇ ವರ್ಷದಿಂದ ಜಿಮ್ ತರಬೇತು ಪಡೆದಿದ್ದಾಳೆ. ತನ್ನ ಕಠಿಣ ಶ್ರಮದಿಂದ ಮತ್ತು ನಿಯಮಿತ ತರಬೇತಿಯಿಂದ ಈ ಕಟ್ಟುಮಸ್ತಾದ ದೇಹವು ಅವಳಿಗೆ ದಕ್ಕಿದೆ. ಇತ್ತೀಚೆಗೆ ಅವಳು 180 ಕೆಜಿ ಭಾರ ಎತ್ತುತ್ತಿದ್ದ ವಿಡಿಯೊ ಕೂಡ ವೈರಲ್ ಆಗಿತ್ತು.

 ಆದರೂ ಜೂಲಿಯಾಳನ್ನು ದ್ವೇಷಿಸುವವರು ಕೂಡ ಇದ್ದಾರೆ. ಮಹಿಳೆ ದೇಹ ಸುಂದರವಾಗಿ ಕಾಣಬೇಕು. ಆದರೆ ಪುರುಷರ ಕಟ್ಟುಮಸ್ತಾದ ದೇಹದಂತಲ್ಲ ಎನ್ನುವವರಿಗೆ ಜೂಲಿ ಕೇರ್ ಮಾಡುವುದಿಲ್ಲ. ನಿಮಗೆ ಯಾವುದು ಇಷ್ಟವೋ ಅದನ್ನು ಮಾಡಿ, ಇತರರು ನಿಮ್ಮ ಬಗ್ಗೆ ಏನು ಭಾವಿಸುತ್ತಾರೆಂಬ ಬಗ್ಗೆ ಚಿಂತೆ ಮಾಡಬೇಡಿ ಎಂದು ಜೂಲಿ ಹೇಳುತ್ತಾಳೆ.

ದ್ವೇಷಿಗಳಿರುವುದು ತಮ್ಮ ಜೀವನ ಪ್ರಯಾಣದ ಭಾಗ. ಅವರಿಂದ ನಾನು ಎಲ್ಲಾ ಟೀಕೆಗಳನ್ನು ಎದುರಿಸಿರದಿದ್ದರೆ, ತಾನು ಮಾನಸಿಕವಾಗಿ ಬಲಿಷ್ಠೆಯಾಗುತ್ತಿರಲಿಲ್ಲ ಎಂದು ಜೂಲಿ ಹೇಳಿದ್ದಾಳೆ. 

Recent Comments

Leave Comments

footer
Top