• 23 September 2019 04:24
Jai Kannada
Jai Kannada
Blog single photo
May 23, 2019

ರಾಹುಲ್ ಗಾಂಧಿ ದುರ್ಬಲ ನಾಯಕತ್ವದಿಂದ ಕಾಂಗ್ರೆಸ್ ಹೀನಾಯ ಸೋಲು ಕಂಡಿತೇ?  

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಗೆ ಬಳಸಿದ ಚೌಕಿ ದಾರ್ ಚೋರ್ ಹೈ ಅಭಿಯಾನ ಮತ್ತು ಅವರ ನ್ಯಾಯ್ ಯೋಜನೆ ಸ್ಪಷ್ಟವಾಗಿ ಭಾರತದ ಮತದಾರರನ್ನು ಸೆಳೆಯಲು ವಿಫಲವಾಗಿದೆ. ಎನ್‌ಡಿಎ ಒಕ್ಕೂಟಕ್ಕೆ ಭರ್ಜರಿ ಜಯವನ್ನು ಗಳಿಸಿಕೊಟ್ಟ ಮತದಾರರು ಕಾಂಗ್ರೆಸ್ ಪಕ್ಷದ ನಾಯಕತ್ವ ಕುರಿತು ಪ್ರಶ್ನಾರ್ಥಕ ಚಿಹ್ನೆಯನ್ನು ಮಂಡಿಸಿದ್ದಾರೆ.

ಈಗಿನ ಲಭ್ಯವಿರುವ ಟ್ರೆಂಡ್ ಪ್ರಕಾರ, ಕಳೆದ ಬಾರಿಗಿಂತ 10 ಹೆಚ್ಚು ಅಂದರೆ 54 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿದೆ. ಲೋಕಸಭೆಯಲ್ಲಿ ಕಳಪೆ ಸಾಧನೆಯಿಂದ ರಾಹುಲ್ ಗಾಂಧಿ ನಾಯಕತ್ವದ ವೈಖರಿ ಬಗ್ಗೆ ಖಂಡಿತವಾಗಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕಾಂಗ್ರೆಸ್ ಅಸೆಂಬ್ಲಿ ಚುನಾವಣೆ ಗೆದ್ದಿದ್ದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಚತ್ತೀಸಗಢದಲ್ಲಿ ಕೂಡ ಹೀನಾಯ ಪ್ರದರ್ಶನ ನೀಡಿದೆ.ಈ ಚುನಾವಣೆ ಫಲಿತಾಂಶದಿಂದ ಅವರ ಪ್ರಚಾರ ಮತ್ತು ಕಾರ್ಯತಂತ್ರ ಸಂಪೂರ್ಣ ವಿಫಲ ಎನ್ನುವುದನ್ನು ಬಿಂಬಿಸಿದೆ.

ಆದರೆ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆದ್ದಿರುವುದು ಅವರ ಚೌಕಿದಾರ್ ಚೋರ್ ಹೈ ಚುನಾವಣೆ ಘೋಷಣೆ ರಾಹುಲ್ ಗಾಂಧಿಗೆ ಎದಿರೇಟು ನೀಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.  ಇದಲ್ಲದೇ ವರ್ಷಕ್ಕೆ 72000 ರೂ. ಬಡಜನರ ಖಾತೆಗೆ ಜಮಾಮಾಡುವ ನ್ಯಾಯ್ ಯೋಜನೆ ಕೂಡ ಮತದಾರರನ್ನು ಸೆಳೆಯಲು ವಿಫಲವಾಗಿದೆ. ಈಗ ರಾಜೀವ್ ಗಾಂಧಿ ಸ್ವತಃ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನಾಡಿದ್ದಾರೆ. ಆದರೆ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಪಕ್ಷ ಸ್ವೀಕರಿಸಿ ವಂಶಾಡಳಿತಕ್ಕೆ ಉತ್ತೇಜನ ನೀಡದೇ ಗಾಂಧಿ ಕುಡಿಯಲ್ಲದ ದಕ್ಷ ಮುಖಂಡರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವ ದೊಡ್ಡ ಮನಸ್ಸು ಮಾಡಬೇಕಾಗಿದೆ.


.

Recent Comments

Leave Comments

footer
Top