• 24 March 2019 12:53
Jai Kannada
Jai Kannada
Blog single photo
January 09, 2018

ಮೊದಲ ಟೆಸ್ಟ್:  ಭಾರತಕ್ಕೆ ದ.ಆಫ್ರಿಕಾ ವಿರುದ್ಧ 72 ರನ್ ಸೋಲು 

ವರ್ನಾನ್ ಫಿಲಾಂಡರ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭದ ಟೆಸ್ಟ್ ಪಂದ್ಯವನ್ನು 72 ರನ್‌‍ಗಳಿಂದ ಸೋತಿದೆ.
ಪ್ರೊಟೀಸ್ ಪೇಸ್ ಬೌಲರ್ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ  3 ವಿಕೆಟ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ  6 ವಿಕೆಟ್ ಕಬಳಿಸುವ ಮೂಲಕ ಭಾರತದ ಇನ್ನಿಂಗ್ಸ್ ಧೂಳೀಪಟ ಮಾಡಿದರು.

ದಕ್ಷಿಣ ಆಫ್ರಿಕಾದ 208 ಗುರಿಯನ್ನು ಕೂಡ ಟೀಂ ಇಂಡಿಯಾಗೆ ಮುಟ್ಟಲಾಗಲಿಲ್ಲ.
 ದಕ್ಷಿಣ ಆಫ್ರಿಕಾ ನಾಯಕ ಪ್ಲೆಸಿಸ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ತೆಗೆದುಕೊಂಡರು. ಪ್ಲೆಸಿಸ್ ಮತ್ತು ಡಿ ವಿಲಿಯರ್ಸ್ ಅವರ 114 ರನ್ ಉತ್ತಮ ಜತೆಯಾಟವಾಡಿದರು. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 286ಕ್ಕೆ ಆಲೌಟ್ ಆಯಿತು.

ನಂತರ ಫೀಲ್ಡಿಂಗ್ ಮಾಡಿದ ದ.ಆಫ್ರಿಕಾ ಪರ ಫಿಲಾಂಡರ್ ಮತ್ತು ರಬಾಡೆ ತಲಾ 3 ವಿಕೆಟ್ ಗಳಿಸಿದರು. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಔಟಾದರು. ಹಾರ್ದಿಕ್ ಪಾಂಡ್ಯ ಅವರ 93 ರನ್ ಮನೋಜ್ಞ ಸ್ಕೋರಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವಾನ್ವಿತ 209 ರನ್ ಗಳಿಸಿತು.
 ಬುಮ್ರಾ ಮತ್ತು ಶಮಿ ತಲಾ 3 ವಿಕೆಟ್ ಕಬಳಿಸಿದ್ದರಿಂದ ದಕ್ಷಿಣ ಆಫ್ರಿಕಾ ಕೇವಲ 130ರನ್‌ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾಯಿತು. 208ರನ್ ಬೆನ್ನಟ್ಟಿದ ಭಾರತ ಆರಂಭದಲ್ಲಿ ಉತ್ತಮವಾಗಿ ಆಡಿದರೂ ಮೇಲಿನ ಕ್ರಮಾಂಕದ ಆಟಗಾರರು ಬಳಿಕ ಕುಸಿದರು.

ಬ್ಯಾಟಿಂಗ್ ಕುಸಿತದ ಬಳಿಕ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಅವರ 49 ಜತೆ ಜತೆಯಾಟ ಭಾರತದ ಪಾಳೆಯದಲ್ಲಿ ಆಸೆ ಚಿಗುರಿಸಿತು.

 ಆದರೆ ಫಿಲಾಂಡರ್ ಮಾರಕ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಭಾರತದ ಆಟಗಾರರು ಉದುರಿದರು.  ಫಿಲಾಂಡರ್ ಎರಡನೇ ಇನ್ನಿಂಗ್ಸ್‌ನಲ್ಲಿ 44 ರನ್ ನೀಡಿ 6 ವಿಕೆಟ್ ಕಬಳಿಸಿದರು. ಫಿಲಾಂಡರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು ಮತ್ತು ದಕ್ಷಿಣ ಆಫ್ರಿಕಾ 1-0 ಮುನ್ನಡೆ ಗಳಿಸಿತು.
 

Recent Comments

Leave Comments

footer
Top