• 19 November 2018 05:55
Jai Kannada
Jai Kannada
Blog single photo
January 08, 2018

ಕಲಾಸಿಪಾಳ್ಯ ಬಾರ್‌ನಲ್ಲಿ ಅಗ್ನಿಅವಘಡ: 5 ಜನರ ಸಜೀವದಹನ 

ಬೆಂಗಳೂರು:  ಬೆಂಗಳೂರಿನ ಕಲಾಸಿಪಾಳ್ಯದ ಬಾರ್‌ನಲ್ಲಿ ಶಾರ್ಟ್‌ಸರ್ಕೀಟ್‌ನಿಂದ ಉಂಟಾದ ಅಗ್ನಿಅವಘಡಕ್ಕೆ 5 ಜನರು ಸಜೀವದಹನವಾದ ಭೀಕರ ಘಟನೆ ಸಂಭವಿಸಿದೆ. ಬಾರ್‌ನಲ್ಲಿ ಕೆಲಸ ಮುಗಿಸಿಕೊಂಡು ನಿದ್ರೆಗೆ ಜಾರಿದ್ದ ಮಹೇಶ್, ಸ್ವಾಮಿ, ಪ್ರಸಾದ್, ಕೀರ್ತಿ, ಮಂಜುನಾಥ್ ಮೃತರು. ನಸುಕಿನ ಜಾವ 2.30ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ.

ಬಾರ್‌ನ ಕೆಳಮಹಡಿಯಲ್ಲಿ ಹೊತ್ತಿ ಕೊಂಡ ಬೆಂಕಿಯಿಂದ ಒಳಗೆ ಮಲಗಿದ್ದ ಐವರು ಹೊರಕ್ಕೆ ಬರಲಾಗದೇ ಸುಟ್ಟು ಕರಕಲಾಗಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಬಾರ್ ಮಾಲೀಕ ತಲೆತಪ್ಪಿಸಿಕೊಂಡಿದ್ದ.

ಬಳಿಕ ಪೊಲೀಸರು ಮಾಲೀಕ ದಯಾಶಂಕರನನ್ನು  ಹುಡುಕಿ ಬಂಧಿಸಿದ್ದಾರೆ. ಮಾಲೀಕನ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ಕೇಸ್ ಹಾಕಿದ್ದಾರೆ. 

Recent Comments

Leave Comments

footer
Top