• 23 September 2019 04:31
Jai Kannada
Jai Kannada
Blog single photo
May 15, 2019

 ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ: ಇಬ್ಬರು ಸಿಪಿಎಂ ಮುಖಂಡರ ಬಂಧನ 

ಕಾಸರಗೋಡು:ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಅಪರಾಧ ವಿಭಾಗ ಪೊಲೀಸರು ಮಂಗಳವಾರ ಸಿಪಿಐ-ಎಂನ ಇಬ್ಬರು ಮುಖಂಡರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಯುವ ಘಟಕದ ಇಬ್ಬರು ಸದಸ್ಯರಾದ ಕೃಪೇಶ್ (19) ಮತ್ತು ಜೋಷಿ(24) ಎಂಬವರ ಮೇಲೆ ಮೂವರು ಫೆ. 17ರಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು.

ಕೃಪೇಶ್ ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಜೋಷಿ ಮಂಗಳೂರಿಗೆ ಸಾಗಿಸುವ ಮಾರ್ಗದಲ್ಲಿ ತೀವ್ರ ಗಾಯಗಳಿಂದ ಮೃತಪಟ್ಟಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಣಿಕಂಠನ್ ಮತ್ತು ಬಾಲಕೃಷ್ಣನ್ ಎಂಬಿಬ್ಬರನ್ನು ತೀವ್ರ ತನಿಖೆಯ ಬಳಿಕ ಬಂಧಿಸಿದ್ದಾರೆಂದು ವಕ್ತಾರ ತಿಳಿಸಿದರು.

ಈ ಬಂಧನದೊಂದಿಗೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಬಂಧನ 13ಕ್ಕೇರಿದ್ದು, ಪೊಲೀಸರು ಕಣ್ಣಿಟ್ಟಿದ್ದ ಇನ್ನೊಬ್ಬ ವ್ಯಕ್ತಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕಾಂಗ್ರೆಸ್ ಪಕ್ಷ ಮತ್ತು ಕಾಸರಗೋಡು ಲೋಕಸಭೆ ಅಭ್ಯರ್ಥಿ ರಾಜಮೋಹನ್ ಉನ್ನಿತನ್ ಈ ಹತ್ಯೆಯನ್ನು ಪ್ರಮುಖ ಚುನಾವಣೆ ವಿಷಯವಾಗಿಸಿಕೊಂಡು ಅಚ್ಚರಿಯ ಗೆಲುವು ಸಾಧಿಸುತ್ತಾರೆಂದು ನಿರೀಕ್ಷಿಸಲಾಗಿದೆ. 
 

Recent Comments

Leave Comments

footer
Top