• 23 September 2019 04:30
Jai Kannada
Jai Kannada
Blog single photo
May 15, 2019

ಬೆಂಗಾವಲು ಪಡೆಗೆ ಪ್ರತ್ಯೇಕ ವಾಹನಕ್ಕೆ ಒತ್ತಾಯಿಸಿ ಮೋದಿ ಸೋದರ ಧರಣಿ 

ಜೈಪುರ: ರಾಷ್ಟ್ರದ ಪ್ರಧಾನಮಂತ್ರಿ ಸೋದರರಾದರೂ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಇಲ್ಲಿನ ಪೊಲೀಸ್ ಅಧಿಕಾರಿಗಳು ಮುಟ್ಟಿಸಿದ್ದಾರೆ. ತಮ್ಮ ಬೆಂಗಾವಲು ಪಡೆಗೆ ಪ್ರತ್ಯೇಕ ವಾಹನ ಒದಗಿಸಬೇಕೆಂದು ಮೋದಿ ಸೋದರ ಪ್ರಹ್ಲಾದ್ ಮೋದಿ ಧರಣಿ ಕುಳಿತರೂ ಪೊಲೀಸರು ಮಣಿಯಲಿಲ್ಲ. 

ಜೈಪುರಕ್ಕೆ ಹೊರಟಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋದರ ಪ್ರಹ್ಲಾದ್ ಮೋದಿ ಮಂಗಳವಾರ ಪೊಲೀಸ್ ಠಾಣೆಯ ಎದುರು ಧರಣಿ ಕುಳಿತು ತಮ್ಮ ಬೆಂಗಾವಲಿಗಿರುವ ಪೊಲೀಸರಿಗೆ ಪ್ರತ್ಯೇಕ ವಾಹನ ನೀಡಬೇಕೆಂದು ಒತ್ತಾಯಿಸಿದರು. ಜೈಪುರ-ಆಜ್ಮಿರ್ ರಾಷ್ಟ್ರೀಯ ಹೆದ್ದಾರಿಯ ಬಾಗ್ರು ಪೊಲೀಸ್ ಠಾಣೆ ಎದುರು ಅವರು ಧರಣಿ ಕುಳಿತಿದ್ದರು.

 ಬಾಗ್ರು ಪೊಲೀಸ್ ಠಾಣೆಯಲ್ಲಿ ಅವರ ರಕ್ಷಣೆಗೆ ಇಬ್ಬರು ಭದ್ರತಾ ಅಧಿಕಾರಿಗಳು ಜತೆಗೂಡಲು ಸಿದ್ಧವಾಗಿದ್ದರೂ ಪ್ರಹ್ಲಾದ್ ಮೋದಿ ತಮ್ಮ ವಾಹನದಲ್ಲೇ ಅವರನ್ನು ಕರೆದೊಯ್ಯಲು ಸಿದ್ಧವಿರಲಿಲ್ಲ.  ಪ್ರಹ್ಲಾದ್ ಮೋದಿಗೆ ಬಳಿಕ ಪೊಲೀಸ್ ಆಯುಕ್ತರು ನಿಯಮಗಳ ಬಗ್ಗೆ  ಮನದಟ್ಟು ಮಾಡಿದರು. ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳನ್ನು ನಿಯಮಗಳ ಪ್ರಕಾರ ಒದಗಿಸಲಾಗಿದ್ದು, ಅವರು ಅವರಿಬ್ಬರ ಜತೆಗೆ ತೆರಳಲಿದ್ದಾರೆಂದು ಜೈಪುರ ಪೊಲೀಸ್ ಆಯುಕ್ತರು ತಿಳಿಸಿದರು.

Recent Comments

Leave Comments

footer
Top