• 23 September 2019 04:51
Jai Kannada
Jai Kannada
Blog single photo
May 14, 2019

ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾಯಿತು, ಈಗ ವೇಣುಗೋಪಾಲ್  ಬಾಂಬ್?

ಚಿಂಚೋಳಿ : ಮೇ 23ರ ನಂತರ ದೋಸ್ತಿ ಸರ್ಕಾರ ಉರುಳುತ್ತೆ, 20 ಶಾಸಕರು ಕಾಂಗ್ರೆಸ್ ತ್ಯಜಿಸುತ್ತಾರೆಂದು ಯಡಿಯೂರಪ್ಪ ಈಗಾಗಲೇ ಬಾಂಬ್ ಸಿಡಿಸಿದ್ದಾಗಿದೆ. ಆದರೆ ಈಗ ಕಾಂಗ್ರೆಸ್ ಪಕ್ಷದವರು ಕೂಡ ಇನ್ನೊಂದು ಬಾಂಬ್ ಸಿಡಿಸುವ ಮೂಲಕ ಬಿಜೆಪಿಗೆ ಚುರುಕು ಮುಟ್ಟಿಸಿದೆ.

ಮೇಲೆ 23ರ ಬಳಿಕ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ತಮ್ಮ ಮಾತೃ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಭವಿಷ್ಯ

ಆದರೆ ಯಾವುದೇ ದುಸ್ಸಾಹಸ ಮಾಡಿದರೂ ಅವರ ಪಕ್ಷ ಅಧಿಕಾರದ ಗದ್ದುಗೆಗೆ ಏರುವುದಿಲ್ಲ. ಇದನ್ನು ಮನಗಂಡು 20 ಬಿಜೆಪಿ ಶಾಸಕರು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷ ಸೇರಲು ಕಾತುರ ಹೊಂದಿದ್ದಾರೆ ಎಂದು ವಿವರಿಸಿದರು. ಚಿಂಚೋಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ದೋಸ್ತಿ ಸರ್ಕಾರ ಕಲ್ಲುಬಂಡೆಯಂತೆ ಗಟ್ಟಿಯಾಗಿದೆ ಎಂದು ಪ್ರತಿಪಾದಿಸಿದರು.


..

Recent Comments

Leave Comments

footer
Top