• 23 September 2019 04:19
Jai Kannada
Jai Kannada
Blog single photo
May 14, 2019

ಮಲಮಗಳ ಕುತ್ತಿಗೆ ಹಿಚುಕಿ ಕೊಂದ ಭಾರತೀಯ ಮೂಲದ ಮಹಿಳೆ

ನ್ಯೂಯಾರ್ಕ್: ಅಮೆರಿಕದಲ್ಲಿರುವ ಭಾರತೀಯ ಮೂಲದ ಮಹಿಳೆಯೊಬ್ಬರು 2016ರಲ್ಲಿ 9 ವರ್ಷದ ಮಲಮಗಳನ್ನು ಹತ್ಯೆಮಾಡಿದ ಆರೋಪವನ್ನು ನ್ಯಾಯಾಧೀಶರು ಹೊರಿಸಿದ್ದು, ಜೀವವಾಧಿ ಶಿಕ್ಷೆಯನ್ನು ಎದುರಿಸಬೇಕಾಗಿದೆ. ನ್ಯೂಯಾರ್ಕ್ ಕ್ವೀನ್ಸ್‌ನಲ್ಲಿರುವ ಶಮದಾಯ್ ಅರ್ಜುನ್(55) ಅವರಿಗೆ ಕ್ವೀನ್ಸ್ ಸುಪ್ರೀಂಕೋರ್ಟ್ ನ್ಯಾಯಾಧೀಶ ಕೆನೆತ್ ಹೋಲ್ಡರ್ ಜೂನ್ ಮೂರರಂದು ಶಿಕ್ಷೆಯ ಪ್ರಮಾಣ ವಿಧಿಸುವುದಾಗಿ ತಿಳಿಸಿದ್ದಾರೆ. 

 2016ರಲ್ಲಿ ತನ್ನ 9 ವರ್ಷ ವಯಸ್ಸಿನ ಮಲಮಗಳಾದ ಅಶದೀಪ್ ಕೌರ್‌ಳನ್ನು ಕುತ್ತಿಗೆ ಹಿಸುಕಿ ಕೊಂದ ಆರೋಪವನ್ನು ಅರ್ಜುನ್ ಮೇಲೆ ಹೊರಿಸಲಾಗಿದೆ. 9 ವರ್ಷದ ಬಾಲಕಿಯನ್ನು ಮಲತಾಯಿಗೆ ನೋಡಿಕೊಳ್ಳಲು ಬಿಡಲಾಗಿತ್ತು. ಆದರೆ ಮಲತಾಯಿಯೇ ಅವಳ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದು ಭಯಾನಕ ವಿದ್ಯಮಾನ. ಅವಳ ಕೃತ್ಯಗಳಿಗೆ ಕಾನೂನಿನ ಅಡಿಯಲ್ಲಿ ಗರಿಷ್ಠ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಉಸ್ತುವಾರಿ ಕ್ವೀನ್ ಜಿಲ್ಲಾ ಅಟಾರ್ನಿ ತಿಳಿಸಿದ್ದಾರೆ.

.ವಿಚಾರಣೆಯಂದು ಸಾಕ್ಷಿಯ ಹೇಳಿಕೆಯಲ್ಲಿ , 2016ರ ಆಗಸ್ಟ್ 19ರ ರಾತ್ರಿ ಅರ್ಜುನ್ ತನ್ನ ಮಾಜಿ ಪತಿ ರೇಮಂಡ್ ನಾರಾಯಣ್ ಮತ್ತು ಅವಳ ಇಬ್ಬರು ಮೊಮ್ಮಕ್ಕಳ ಜತೆ ಕ್ವೀನ್ಸ್‌ನಲ್ಲಿ ಅಪಾರ್ಟ್‌ಮೆಂಟ್‌ನಿಂದ ನಿರ್ಗಮಿಸಿದ್ದನ್ನು ಪ್ರತ್ಯಕ್ಷದರ್ಶಿ ಗಮನಿಸಿದ್ದಾರೆ. 9 ವರ್ಷದ ಮಗಳು ಎಲ್ಲಿದ್ದಾಳೆಂದು ಕೇಳಿದಾಗ ಅರ್ಜುನ್ ಅವಳು ಶೌಚಾಲಯದಲ್ಲಿದ್ದು, ಅವಳ ತಂದೆ ಪಿಕ್ ಅಪ್ ಮಾಡುತ್ತಾರೆಂದು ತಿಳಿಸಿದ್ದರು. 
ಬಾತ್ ರೂಂ ಲೈಟ್ ತುಂಬಾ ಹೊತ್ತು ಆನ್ ಆಗಿದ್ದನ್ನು ಕಂಡ ಪ್ರತ್ಯಕ್ಷದರ್ಶಿ ಸಂತ್ರಸ್ತೆಯ ತಂದೆ ಸುಖಜೀಂದರ್ ಸಿಂಗ್ ಅವರಿಗೆ ಕರೆ ಮಾಡಿದರು.

ಬಾತ್ ರೂ. ಲಾಕ್ ಆಗಿದ್ದನ್ನು ಕಂಡು ಬಾಗಿಲು ಒಡೆದು ನೋಡಿದಾಗ ಅಶದೀಪ್ ಕೌರ್ ನಗ್ನದೇಹ ಬಾತ್ ಟಪ್‌ನಲ್ಲಿರುವುದನ್ನು ಕಂಡು ಆಘಾತವಾಗಿತ್ತು. ಅವಳ ದೇಹದ ಮೇಲೆ ಅನೇಕ ಗಾಯದ ಗುರುತುಗಳಿದ್ದವು.  ಶವಪರೀಕ್ಷೆಯಲ್ಲಿ ಕುತ್ತಿಗೆ ಹಿಸುಕಿ ಕೊಂದಿರುವುದು ದೃಢಪಟ್ಟಿತ್ತು. ಅರ್ಜುನ್ ಆ ಬಾಲಕಿಗೆ ಹಿಂದೆಯೂ ಕೂಡ ದೌರ್ಜನ್ಯವೆಸಗಿದ್ದಾರೆಂದು ಕೌರ್ ಸಂಬಂಧಿಗಳು ಹೇಳಿದ್ದಾರೆ. ಸಿಂಗ್ ಮೊದಲ ಪತ್ನಿಯ ಮಗಳಾದ ಕೌರ್ ತಾಯಿ ತೀರಿಕೊಂಡ ಮೇಲೆ ಅರ್ಜುನ್ ಸುಪರ್ದಿಗೆ ಸಿಂಗ್ ಬಿಟ್ಟು ಸ್ಥಳೀಯ ರೆಸ್ಟೊರೆಂಟ್ ಕೆಲಸಕ್ಕೆ ತೆರಳುತ್ತಿದ್ದರು.

Recent Comments

Leave Comments

footer
Top