• 23 September 2019 04:47
Jai Kannada
Jai Kannada
Blog single photo
May 12, 2019

ಕಾಶ್ಮೀರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಾಂತ್ಯವಿದೆಯೇ? 

ಶ್ರೀನಗರ: ಇತಿಹಾಸದಲ್ಲೇ ಮೊದಲ ಬಾರಿಗೆ ಇಸ್ಲಾಮಿಕ್ ಸ್ಟೇಟ್ ಭಾರತದ ಕಾಶ್ಮೀರದಲ್ಲಿ  ಪ್ರಾಂತ್ಯವನ್ನು ಸ್ಥಾಪಿಸಿರುವುದಾಗಿ ಪ್ರತಿಪಾದಿಸಿದೆ. ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಕಾಶ್ಮೀರದಲ್ಲಿ ನಡೆದ ಚಕಮಕಿಯಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ಉಗ್ರಗಾಮಿ ಹತನಾಗಿದ್ದಾರೆಂದು ವರದಿಯಾದ ಬೆನ್ನಲ್ಲೇ ಈ ಪ್ರತಿಪಾದನೆ ಮಾಡಲಾಗಿದೆ. ಇರಾಕ್, ಲಿಬಿಯಾದಲ್ಲಿ ನೆಲೆ ಕಳೆದುಕೊಂಡ ಇಸ್ಲಾಮಿಕ್ ಉಗ್ರರು ಸುರಕ್ಷಿತ ತಾಣಕ್ಕಾಗಿ ಶೋಧಿಸಿ ಕಾಶ್ಮೀರಕ್ಕೆ ಕಾಲಿಟ್ಟಿರಬಹುದೇ ಎಂಬ ಸಂಶಯ ಒಂದು ಕ್ಷಣ ಎದೆಬಡಿತ ಹೆಚ್ಚಿಸುತ್ತದೆ.

ಇಸ್ಲಾಮಿಕ್ ಉಗ್ರರು ಅಷ್ಟೊಂದು ಕ್ರೂರಿಗಳು, ನಿರ್ದಯ ಕೊಲೆಪಾತಕಿಗಳು.  ಐಎಸ್‌ನ ಅಮಾಕ್ ಸುದ್ದಿ ಸಂಸ್ಥೆ ಶುಕ್ರವಾರ ಈ ಪ್ರಾಂತ್ಯವನ್ನು ವಿಲ್ಲಾಯ ಆಫ್ ಹಿಂದ್ ಎಂದು ಹೆಸರಿಟ್ಟಿರುವುದಾಗಿ ಪ್ರಕಟಿಸಿದೆ. ಕಾಶ್ಮೀರದ ಶೋಪಿಯಾನ್ ಆಮ್ಶಿಪೋರಾ ಪಟ್ಟಣದಲ್ಲಿ ಭಾರತದ ಸೈನಿಕರ ಸಾವು ನೋವು ಉಂಟುಮಾಡಿದ್ದಾಗಿ ಐಎಸ್ ಪ್ರತಿಪಾದಿಸಿದೆ.

ಈ ನಡುವೆ ಇಸ್ಲಾಮಿಕ್ ಸ್ಟೇಟ್ ಈಸ್ಟರ್ ಸಂಡೇ ಬಾಂಬ್ ದಾಳಿ ಹೊಣೆಗಾರಿಕೆಯನ್ನು ಹೊತ್ತಿತ್ತು. ಐಎಸ್ ವಿಸ್ತರಣೆ ಕುರಿತು ಇಸ್ಲಾಮಿಕ್ ಉಗ್ರರ ಜಾಡುಹಿಡಿಯುವ ಸೈಟ್ ಇಂಟೆಲ್ ಗ್ರೂಪ್ ನಿರ್ದೇಶಕರಾದ ರಿಟಾ ಕಟ್ಜ್, ವಾಸ್ತವ ಆಡಳಿತದ ಕುರುಹು ಇಲ್ಲದ ಪ್ರದೇಶದಲ್ಲಿ  ಪ್ರಾಂತ್ಯ ಸ್ಥಾಪಿಸಿರುವುದಾಗಿ ಐಸಿಸ್ ಹೇಳುತ್ತಿರುವುದು ಅಸಂಬದ್ಧ. ಆದರೆ ಇದನ್ನು ತಳ್ಳಿಹಾಕುವುದಕ್ಕೂ ಆಗುವುದಿಲ್ಲ ಎಂದಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ವಿಶ್ವ ಗಮನನೀಡದಿದ್ದರೂ, ಇಂತಹ ಒಡ್ಡಿಕೊಳ್ಳಬಹುದಾದ ಪ್ರದೇಶಗಳಲ್ಲಿ ಜಿಹಾದಿಗಳಿಗೆ ಐಎಸ್ ಕಲೀಫೇಟ್ ನಕ್ಷೆಯ ಮರುಸ್ಥಾಪನೆಗೆ ಅಡಿಪಾಯ ಹಾಕಲು ಮಹತ್ವದ ಇಂಗಿತವಾಗಿದೆ.
 

Recent Comments

Leave Comments

footer
Top