• 23 September 2019 04:18
Jai Kannada
Jai Kannada
Blog single photo
May 10, 2019

 ಜೆಟ್ ಏರ್‌ವೇಸ್‌ಗೆ ಮರುಜೀವ:  ಹೂಡಿಕೆಗೆ ಬಿಡ್ ಸಲ್ಲಿಸಿದ ಎತಿಹಾಡ್ 

ಮುಂಬೈ: ಆರ್ಥಿಕ ಸಂಕಷ್ಟದಿಂದ ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್‌ವೇಸ್ ಸಂಸ್ಥೆಗೆ ಅದರ ಪಾಲುದಾರ ಎಥಿಹಾಡ್ ಏರ್‌ವೇಸ್ ಬಿಡ್ ಸಲ್ಲಿಕೆಗೆ ಗಡುವು ಮುಗಿಯಲು ಕೆಲವೇ ನಿಮಿಷಗಳು ಬಾಕಿವುಳಿದಿದ್ದಾಗ ಏರ್‌ಲೈನ್‌ನಲ್ಲಿ ಹೂಡಿಕೆ ಮಾಡಲು ಬಿಡ್ ಸಲ್ಲಿಸುವ ಮೂಲಕ ಜೆಟ್ ಏರ್‌ವೇರ್ ಪುನಶ್ಚೇತನಗೊಳ್ಳುವ ಆಶಾಕಿರಣ ಮೂಡಿದೆ.

 ಜೆಟ್ ಏರ್‌ವೇಸ್‌ನಲ್ಲಿ ಕೆಲವು ಷರತ್ತುಗಳ ಆಧಾರದ ಮೇಲೆ ಮರುಹೂಡಿಕೆ ಮಾಡುವ ಆಸಕ್ತಿಯನ್ನು ಎತಿಹಾಡ್ ಏರ್‌ವೇಸ್ ಖಚಿತಪಡಿಸಿದೆ ಎಂದು ಜೆಟ್‌ನಲ್ಲಿ ಶೇ. 24 ರಷ್ಟು ಪಾಲು ಹೊಂದಿರುವ ಎತಿಹಾಡ್ ವಕ್ತಾರ ತಿಳಿಸಿದ್ದಾರೆ. ಆದರೆ ಏರ್‌ಲೈನ್ ಏಕಮಾತ್ರ ಹೂಡಿಕೆದಾರ ಎಂದು ನಿರೀಕ್ಷಿಸುವಂತಿಲ್ಲ.

ಜೆಟ್ ಏರ್ ವೇಸ್ ಅಗತ್ಯ ಬಂಡವಾಳಕ್ಕೆ ಹೆಚ್ಚುವರಿ ಸೂಕ್ತ ಹೂಡಿಕೆದಾರರು ಆರ್ಥಿಕ ನೆರವು ನೀಡಬೇಕಾಗಿದೆ ಎಂದು ತಿಳಿಸಿದರು.  ಏರ್‌ಲೈನ್‌ನಲ್ಲಿ ಹೂಡಿಕೆ ಮಾಡಲು ಅರ್ಹ ಬಿಡ್ ಮೊತ್ತವನ್ನು ಸಲ್ಲಿಸಿದ ಆಯ್ಕೆಗೊಂಡ ಬಿಡ್ಡರ್ ಜೆಟ್‌ಏರ್ ವೇಸ್ ಮಾತ್ರ. ಉಳಿದ ಬಿಡ್ ದಾರರು ಎನ್‌ಐಐಎಫ್, ಟಿಪಿಜಿ ಕ್ಯಾಪಿಟಲ್ ಮತ್ತು ಇಂಡಿಗೊ ಪಾಲುದಾರರು. ಕಳೆದ ಏಪ್ರಿಲ್ 17ರಂದು ಆರ್ಥಿಕ ದುಸ್ಥಿತಿ ಎದುರಿಸಿದ ಜೆಟ್ ಏರ್‌ವೇಸ್ ಹಾರಾಟ ಸ್ಥಗಿತಗೊಳಿಸಿತ್ತು. 

Recent Comments

Leave Comments

footer
Top