• 19 August 2018 05:11
Jai Kannada
Jai Kannada
Blog single photo
January 07, 2018

 ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಾವು 

ಬೆಂಗಳೂರು: ಬೆಂಗಳೂರಿನ ಸೋಮಸಂದ್ರಪಾಳ್ಯದ ಮ್ಯಾನ್‌ಹೋಲ್‌ವೊಂದರಲ್ಲಿ  ಮೂವರು ಕಾರ್ಮಿಕರು ಸಿಲುಕಿಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.  ಮೂವರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ.

  ಮ್ಯಾನ್‌ಹೋಲ್  ಸರಿಪಡಿಸಲು ಅದರೊಳಕ್ಕೆ ಇಳಿದಿದ್ದಾಗ ಮ್ಯಾನ್‌ಹೋಲ್‌ನಲ್ಲಿ ಮೂವರು ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಮ್ಯಾನ್‌ಹೋಲ್‌ನೊಳಗಿದ್ದ ವಿಷಗಾಳಿ ಕುಡಿದು ಮೂವರೂ ಮೃತಪಟ್ಟಿದ್ದಾರೆ.

ಮ್ಯಾನ್‌ಹೋಲ್‌ನಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ಬಂಡೆಪಾಳ್ಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದರು.. ಎನ್. ಡಿ. ಸೆಪಲ್  ಅಪಾರ್ಟ್‌ಮೆಂಟ್ ಒಳಗಿರುವ ಮ್ಯಾನ್‌ಹೋಲ್‌ನಲ್ಲಿ ಈ ಘಟನೆ ಸಂಭವಿಸಿದೆ.

ಮ್ಯಾನ್‌ಹೋಲ್‌ನೊಳಗೆ ಕಾರ್ಮಿಕರನ್ನು ಇಳಿಸಬಾರದು ಎಂದು ನಿಯಮ ಮಾಡಲಾಗಿದೆ. ಆದರೆ ನಿಯಮ ಉಲ್ಲಂಘಿಸಿ ಮ್ಯಾನ್‌ಹೋಲ್‌ನೊಳಗೆ ಇಳಿಸಿರುವುದು ಅಕ್ಷಮ್ಯ ಅಪರಾಧವೆನಿಸಿದೆ. ಇಂತಹ ದೊಡ್ಡ ಗಾತ್ರದ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಯಂತ್ರಗಳನ್ನು ಯಾಕೆ ಬಳಸಿಲ್ಲ ಎನ್ನುವುದೇ ಪ್ರಶ್ನಾರ್ಥಕವಾಗಿದೆ. 

Recent Comments

Leave Comments

footer
Top