• 23 September 2019 04:39
Jai Kannada
Jai Kannada
Blog single photo
May 10, 2019

ಐಪಿಎಲ್‌ ಪಂದ್ಯದಲ್ಲಿ ಚೆಂಡು ವಿಕೆಟ್‌ಗೆ ತಾಗಿಲ್ಲ, ಆದರೂ ರನ್‌ಔಟ್ ಡಿಕ್ಲೇರ್

 ವಿಶಾಖಪಟ್ಟಣಂ: ಐಪಿಎಲ್ ಇತಿಹಾಸದಲ್ಲೇ ವಿಚಿತ್ರವಾದ ರನೌಟ್ ಪ್ರಕರಣವೊಂದು ಸಂಭವಿಸಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಡೆಲ್ಲಿ ತಂಡದ ಎಲಿಮಿನೇಟರ್ ಪಂದ್ಯದಲ್ಲಿ ಅಮಿತ್ ಮಿಶ್ರಾ ವಿಚಿತ್ರ ರೀತಿಯಲ್ಲಿ ರನೌಟ್ ಆಗಿದ್ದಾರೆ.  ಡೆಲ್ಲಿ ತಂಡಕ್ಕೆ ಕೊನೆಯ ಓವರಿನಲ್ಲಿ 5 ರನ್ ಅಗತ್ಯವಿತ್ತು. ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ  ಅಮಿತ್ ಮಿಶ್ರಾ ಚೆಂಡು ಮಿಸ್ ಆದಾಗ ಸಿಂಗಲ್ ರನ್ ಕದಿಯಲು ಮುಂದಾದಾಗ ವಿಕೆಟ್ ಕೀಪರ್ ವಿಕೆಟ್‌ನತ್ತ ಎಸೆದ ಚೆಂಡು ಸೀದಾ ಬೌಲರ್ ಕೈ ತಲುಪಿತ್ತು.

ಖಲೀಲ್ ಚೆಂಡನ್ನು ನಾನ್ ಸ್ಟ್ರೈಕ್‌ನಲ್ಲಿ ವಿಕೆಟ್‌ಗೆ ಗುರಿಯಿಟ್ಟಾಗ ಅಮಿತ್ ಮಿಶ್ರಾ ಅಡ್ಡಬಂದಿದ್ದರಿಂದ ಅವರ ಮೈಗೆ ಚೆಂಡು ತಾಗಿತ್ತು. ಕೂಡಲೇ ಖಲೀಲ್ ರನೌಟ್ ಅಪೀಲ್ ಮಾಡಿದ್ದರಿಂದ ಅಂಪೈರ್ ಮೂರನೇ ಅಂಪೈರ್ ಮೊರೆ ಹೋಗಿ ಔಟ್ ಡಿಕ್ಲೇರ್ ಮಾಡಿದರು.  ಅಮಿತ್ ಮಿಶ್ರಾ ಉದ್ದೇಶಪೂರ್ವಕವಾಗಿ ಪಿಚ್ ಮಧ್ಯದಲ್ಲಿ ಓಡಿದ್ದರಿಂದ ಚೆಂಡು ವಿಕೆಟ್‌ಗೆ ಬಡಿಯದೇ ಅವರ ಮೈ ತಾಗಿತ್ತು. 

 ವಿಡಿಯೊ ಕ್ಲಿಕ್ ಮಾಡಿ 

Recent Comments

Leave Comments

footer
Top