• 19 August 2018 05:12
Jai Kannada
Jai Kannada
Blog single photo
January 06, 2018

ಸಿ ವೋಟರ್ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ 

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ಹೋರಾಟ ನಡೆಯುವ ಮುನ್ಸೂಚನೆಯನ್ನು ಸಿ ವೋಟರ್ ಸಮೀಕ್ಷೆ ನೀಡಿದೆ.   ಸಿ ವೋಟರ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 224 ಕ್ಷೇತ್ರಗಳ ಪೈಕಿ  102 ಸೀಟುಗಳನ್ನು ಗೆಲ್ಲಲಿದೆ.

ಬಿಜೆಪಿ 96 ಸೀಟುಗಳನ್ನು ಗೆಲ್ಲಲಿದೆ. ಜೆಡಿಎಸ್ 25 ಸ್ಥಾನಗಳನ್ನು ಗೆಲ್ಲಬಹುದು ಇತರೆ 1 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. ಆದರೆ ಚುನಾವಣೆಗೆ ಇನ್ನೂ ಕೆಲವು ತಿಂಗಳು ಬಾಕಿ ಉಳಿದಿದ್ದು, ಅಷ್ಟರಲ್ಲಿ ಫಲಿತಾಂಶ ಮೇಲುಕೆಳಗಾಗುವ ಸಂಭವವೂ ಇಲ್ಲದಿಲ್ಲ.

 2013ರ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಕ್ಷವು 20 ಸ್ಥಾನಗಳನ್ನು ಈ ಬಾರಿ ಕಳೆದುಕೊಳ್ಳಲಿದೆ, ಬಿಜೆಪಿ 56 ಸ್ಥಾನಗಳನ್ನು ಗಳಿಸಿಕೊಂಡರೆ, ಜೆಡಿಎಸ್ 15 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಮತ್ತು ಇತರೆ ಪಕ್ಷಗಳು 21 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಪ್ರಸಕ್ತ ಸಮೀಕ್ಷೆಯನ್ನು ಗಮನಿಸಿದರೆ  ಜೆಡಿಎಸ್ ಕಿಂಗ್ ಮೇಕರ್ ಪಾತ್ರವನ್ನು ವಹಿಸುವ ಮೂಲಕ ಮತ್ತು ರಾಜ್ಯ ರಾಜಕೀಯದಲ್ಲಿ ತನ್ನ ಗುರುತನ್ನು ಅಚ್ಚೊತ್ತಬಹುದು. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು, ಜೆಡಿಎಸ್ ಕಿಂಗ್ ಮೇಕರ್ ಪಾತ್ರ ವಹಿಸುತ್ತದೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು.

Recent Comments

Leave Comments

footer
Top