• 19 November 2018 06:33
Jai Kannada
Jai Kannada
Blog single photo
January 06, 2018

ಲಾಲೂಗೆ ಮೂರುವರೆ ವರ್ಷ ಜೈಲು ಶಿಕ್ಷೆ , 5 ಲಕ್ಷ ದಂಡ 

ಪಾಟ್ನಾ: ಬಹುಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾದ ಲಾಲೂ ಯಾದವ್ ಅವರಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸಿ ಸಿಬಿಐ ನ್ಯಾಯಾಧೀಶ ಶಿವಪಾಲ್ ಸಿಂಗ್ ತೀರ್ಪು ನೀಡಿದ್ದಾರೆ.

ಲಾಲೂ ಪ್ರಸಾದ್ ಅವರು ವೃದ್ಧಾಪ್ಯದ ದೆಸೆಯಿಂದ ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಅತೀ ಕಡಿಮೆಯಾದ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕೆಂದು ಲಾಲೂ ವಕೀಲರು ಮನವಿ ಸಲ್ಲಿಸಿದ್ದರು.  ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಯಿಂದ ಅವರು ವಿಶೇಷ ಕೋರ್ಟ್‌ನಿಂದ ಜಾಮೀನು ಪಡೆಯಲು ಅರ್ಹತೆ ಗಳಿಸುತ್ತಾರೆ.

ತಮಗೆ ಶಿಕ್ಷೆ ವಿಧಿಸಿದ್ದು ರಾಜಕೀಯ ದ್ವೇಷದ ಫಲ ಎಂದು ಲಾಲೂ ಹೇಳಿದರು.ನಮ್ಮನ್ನು ಅನುಸರಿಸಿ, ಇಲ್ಲದಿದ್ದರೆ ನಿಮ್ಮನ್ನು ಸಿಕ್ಕಿಹಾಕಿಸುತ್ತೇವೆ ಎಂಬ  ಬಿಜೆಪಿಯ ಸರಳ ನಿಯಮವನ್ನು ಅನುಸರಿಸುವ ಬದಲಿಗೆ ಸಾಮಾಜಿಕ ನ್ಯಾಯ, ಸಾಮರಸ್ಯ ಮತ್ತು ಸಮಾನತೆಗಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಲಾಲೂ ಟ್ವೀಟ್ ಮಾಡಿದ್ದಾರೆ.


 

Recent Comments

Leave Comments

footer
Top