• 23 September 2019 04:06
Jai Kannada
Jai Kannada
Blog single photo
May 04, 2019

ಚಿತ್ರನಟಿ ಹರ್ಷಿಕಾ ಪೂಣಚ್ಚಗೆ ಕಿರುಕುಳದ ಆರೋಪ 

ಮಡಿಕೇರಿ: ಸಿನಿಮಾ ನಟಿ ಹರ್ಷಿಕಾ ಪೂಣಚ್ಚ ಅವರು ನೀರುಕೊಲ್ಲಿಯ ರೆಸಾರ್ಟ್‌ನಲ್ಲಿ ತಂಗಿದ್ದಾಗ ಮೇ 2ರಂದು ರಾತ್ರಿ ಇಬ್ಬರು ವ್ಯಕ್ತಿಗಳು ತಮ್ಮ ಜತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾರೆ. ಹರ್ಷಿಕಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬನ್ಸಿ ನಾಣಯ್ಯ ಎಂಬವವನ್ನು ಬಂಧಿಸಿದ್ದಾರೆ.

ಬನ್ಸಿ ಹರ್ಷಿಕಾ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆಂದು ಆರೋಪಿಸಲಾಗಿದೆ. ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಗುರುವಾರ ರಾತ್ರಿ ತಮ್ಮ ಸಂಬಂಧಿಯ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿಲು ಹರ್ಷಿಕಾ ಪಟ್ಟಣಕ್ಕೆ ಬಂದಿದ್ದರು. ಅವರು ಮತ್ತು ಇನ್ನೊಬ್ಬ ನಟ ಭುವನ್ ಈ ರೆಸಾರ್ಟ್‌ನಲ್ಲಿ ತಂಗಿದ್ದಾಗ ಇಬ್ಬರು ಆರೋಪಿಗಳು ಅವರ ಜತೆ ದುರ್ನಡತೆಯನ್ನು ತೋರಿಸಿದ್ದಾರೆ ಎಂದು ಹರ್ಷಿಕಾ ದೂರಿದ್ದಾರೆ

. ಭುವನ್ ಅವರಿಬ್ಬರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಅವರು ಭುವನ್ ಮೇಲೆ ಹಲ್ಲೆ ಮಾಡಿದ್ದರು.  ಭುವನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ  ಭುವನ್ ಮತ್ತು ಹರ್ಷಿಕಾ ಬೆಂಗಳೂರಿಗೆ ತೆರಳಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಾಪತ್ತೆಯಾದ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
 

Recent Comments

Leave Comments

footer
Top