• 24 September 2018 11:08
Jai Kannada
Jai Kannada
Blog single photo
January 06, 2018

ಸುದೀಪ್ ಅಭಿನಯದ ಹಾಲಿವುಡ್ ಚಿತ್ರ ಶೀಘ್ರದಲ್ಲೇ 

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಜನವರಿ ಕೊನೆಯಲ್ಲಿ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಕಿಚ್ಚನ ಹಾಲಿವುಡ್ ಎಂಟ್ರಿಗೆ ವೇದಿಕೆ ರೆಡಿಯಾಗಿದೆ. ಇದು ಆಸ್ಟ್ರೇಲಿಯಾದಲ್ಲಿ ಎಡ್ಡಿ ಆರ್ಯ ನಿರ್ದೇಶನದ ಚಿತ್ರ.ಉಲ್ಕಾಶಿಲೆ ಅಪ್ಪಳಿಸುವ ಪರಿಣಾಮದ ಕಥಾನಕವನ್ನು ಇದು ಒಳಗೊಂಡಿದೆ.

ವಿಷಕಾರಿ ಅನಿಲವೊಂದು ಗಾಳಿಯಲ್ಲಿ ಸೇರಿಕೊಂಡು ಏನೆಲ್ಲಾ ಆನಾಗುತ ಆಗುತ್ತದೆ ಎನ್ನುವುದೇ ಚಿತ್ರದ ಕಥೆ. ರೈಸನ್ ಚಿತ್ರದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಸುದೀಪ್ ಅವರ ಪಾತ್ರವನ್ನು ನ್ಯೂಯಾರ್ಕ್ ನಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಸುದೀಪ್ ಅವರೊಂದಿಗೆ ಸಮಾಲೋಚನೆ ನಡೆಸಿದ ಚಿತ್ರತಂಡ ಈಗಾಗಲೇ ಫಸ್ಟ್ ಲುಕ್ ಚಿತ್ರೀಕರಿಸಿದೆ. ಫಸ್ಟ್ ಲುಕ್ ಅನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದೇವೆ ಎಂದು ಎಡ್ಡಿ ಆರ್ಯ ಹೇಳಿದ್ದಾರೆ.

Recent Comments

Leave Comments

footer
Top