• 23 September 2019 04:07
Jai Kannada
Jai Kannada
Blog single photo
April 26, 2019

ನೀರವ್ ಮೋದಿ ಕಾರುಗಳ ಹರಾಜಿನಿಂದ ಸಿಕ್ಕಿದ್ದು ಕೇವಲ 3.29 ಕೋಟಿ ರೂ. 

ಭಾರತದ ಬ್ಯಾಂಕುಗಳಿಗೆ 14,000 ಕೋಟಿ ರೂ. ಪಂಗನಾಮ ಹಾಕಿ ಲಂಡನ್‌ನಲ್ಲಿ ಝಾಂಡಾ ಹೂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ ಸಾಲ ವಸೂಲಾತಿಗಾಗಿ ನೀರವ್ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 13 ಕಾರುಗಳನ್ನು ಜಾರಿ ನಿರ್ದೇಶನಾಲಯ ಹರಾಜು ಹಾಕಿದೆ.

ಆದರೆ 13 ಕಾರುಗಳ ಪೈಕಿ ಹರಾಜುದಾರರು ಒಂದು ಕಾರನ್ನು ಬಿಟ್ಟು ಉಳಿದೆಲ್ಲಾ ಕಾರುಗಳನ್ನು ಖರೀದಿಸಿದ್ದಾರೆ. ಈ ಮಾರಾಟದಿಂದ  ಇಡಿಗೆ ಸಿಕ್ಕಿರುವ ಒಟ್ಟು ಹಣ  ಬರೀ 3.29 ಕೋಟಿ ಮಾತ್ರ. ಒಟ್ಟು ಮೀಸಲು ದರವಾಗಿ 3.01 ಕೋಟಿ ರೂ.ಗಳಿಗಿಂತ ಲಾಭ ಸಿಕ್ಕಿದೆ.  ಲೋಹ ಚೂರುಪಾರು ವ್ಯಾಪಾರ ನಿಗಮ ಈ ಹರಾಜನ್ನು ನಿರ್ವಹಿಸಿತ್ತು. 13 ಕಾರುಗಳ ಪೈಕಿ ಚೋಕ್ಸಿಗೆ ಸೇರಿದ ಬಿಎಂಡಬ್ಲ್ಯು ಮತ್ತು ಟೊಯೊಟಾ ಇನ್ನೋವಾ ಮತ್ತು ನೀರವ್ ಮೋದಿ ಸೋದರ ನೀಶಲ್‌ಗೆ ಸೇರಿದ ಸ್ಕೋಡಾ ಸೂಪರ್ಬ್ ಕೂಡ ಒಳಗೊಂಡಿದೆ.

ಪಟ್ಟಿಯಲ್ಲಿದ್ದ ಅತ್ಯಂತ ದುಬಾರಿ ಕಾರು ಪಿವ್‌ಟರ್ ರೋಲ್ಸ್ ರಾಯ್ ಗೋಸ್ಟ್ 1,33, 1000 ರೂ. ಗಳಿಸಿಕೊಟ್ಟಿತು. ಹರಾಜಿನ ಮೂಲದರ 1.33 ಕೋಟಿಗಿಂತ 10,000 ರೂ. ಹೆಚ್ಚಿಗೆ ಸಿಕ್ಕಿತು. ಈ ಐಷಾರಾಮಿ ಕಾರಿನ ಮೂಲ ದರ 5 ಕೋಟಿ ರೂ.ಗಳು. 
ನೀರವ್‌ರನ್ನು ಬ್ರಿಟನ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಲಂಡನ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ಸದ್ಯಕ್ಕೆ ಜೈಲಿನಲ್ಲಿರುವ ನೀರವ್ ವಿಡಿಯೊಲಿಂಕ್‌ ಮೂಲಕ ಕೋರ್ಟ್‌ನ ವಿಚಾರಣೆಗೆ ಶುಕ್ರವಾರ ಹಾಜರಾಗಲಿದ್ದಾರೆ.

  1. ಮಾರಾಟವಾದ ಕಾರುಗಳು

ರಾಲ್ಸ್ ರಾಯ್ಸೆ ಗೋಸ್ಟ್ ಮೂಲದರ 1.33 ಕೋಟಿ ರೂ. ಮಾರಾಟ ದರ 1,33,10000 , ಮರ್ಸಿಡಿಸ್ ಬೆಂಜ್ ಮೂಲ ದರ 14 ಲಕ್ಷ ಮಾರಾಟ ದರ 16 ಲಕ್ಷ, ಪೋರ್ಶ್ಚೆ ಮೂಲ ದರ 54.60 ಲಕ್ಷ ಮಾರಾಟ ದರ 54.60 ಲಕ್ಷ ರೂ. ಬಿಎಂಡಬ್ಲ್ಯು 9.80 ಲಕ್ಷ ರೂ. ಮೂಲದರ, ಮಾರಾಟ ದರ 11.75 ಲಕ್ಷ ರೂ.

Recent Comments

Leave Comments

footer
Top