• 18 November 2019 11:23
Jai Kannada
Jai Kannada
Blog single photo
April 26, 2019

 ವಿಡಿಯೊ ತೆಗೆದ ವ್ಯಕ್ತಿಯ ಮೊಬೈಲ್ ಕಸಿದುಕೊಂಡ ಸಲ್ಮಾನ್ 

ಮುಂಬೈ: ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ವಿರುದ್ಧ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕಿತ್ತುಕೊಂಡಿರುವ ಆರೋಪವನ್ನು ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಮಾಡಲಾಗಿದೆ. ಬುಧವಾರ ಸಂಜೆ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಭರತ್‌ಗಾಗಿ ಕೆಲವು ಪ್ರೊಮೋಷನಲ್ ವಿಡಿಯೋಗಳ ಚಿತ್ರೀಕರಣಕ್ಕಾಗಿ ಮುಂಬೈನ ಯಶ್ ರಾಜ್ ಸ್ಟುಡಿಯೋ ತಲುಪಲು ಸೈಕಲ್ ತುಳಿದುಕೊಂಡು ಹೊರಟಿದ್ದರು. ದಾರಿಯಲ್ಲಿ ನಟ ವ್ಯಕ್ತಿಯೊಬ್ಬನ ಜತೆ ಜಗಳವಾಡಿ ಅವನ ಮೊಬೈಲ್ ಕಸಿದುಕೊಂಡು ಕಳಿಸಿದ್ದರು.

ಆ ವ್ಯಕ್ತಿ ಅಶೋಕ್ ಶ್ಯಾಮಲಾಲ್ ಪಾಂಡೆ ಪತ್ರಕರ್ತನಾಗಿದ್ದು, ಸಲ್ಮಾನ್ ಖಾನ್ ವಿಡಿಯೊ ತೆಗೆಯಲು ಯತ್ನಿಸಿದ್ದರಿಂದ ಸಲ್ಮಾನ್ ಮೊಬೈಲ್ ಕಸಿದುಕೊಂಡಿದ್ದರು.

ನಟನ ಅಂಗರಕ್ಷಕ ತಮಗೆ ಚಿತ್ರೀಕರಣ ಮಾಡುವಂತೆ ಅನುಮತಿ ನೀಡಿದ್ದರಿಂದ ತಾವು ತಾವು ಮತ್ತು ಛಾಯಾಚಿತ್ರಗ್ರಾಹಕ ಸಲ್ಮಾನ್ ಚಿತ್ರೀಕರಣ ಆರಂಭಿಸಿದ್ದಾಗಿ ಪಾಂಡೆ ಹೇಳಿದ್ದಾರೆ. ಆದರೆ ಸಲ್ಮಾನ್ ಖಾನ್ ಅವರಿಗೆ ತಮ್ಮ ಚಿತ್ರ ತೆಗೆಯುವುದು ಇಷ್ಟವಾಗಿಲ್ಲವಾದ್ದರಿಂದ ಪಾಂಡೆ ಜತೆ ಜಗಳವಾಡಿದರು. ಪಾಂಡೆ ತಮ್ಮ ಆರೋಪದಲ್ಲಿ ಸಲ್ಮಾನ್ ಅಂಗರಕ್ಷಕರು ತಮ್ಮ ಜತೆ ದುರ್ವರ್ತನೆ ತೋರಿದ್ದಾರೆಂದು ಟೀಕಿಸಿದ್ದಾರೆ. ಆದರೆ ಸಲ್ಮಾನ್ ಅಂಗರಕ್ಷಕ ದೂರುದಾರರ ವಿರುದ್ಧ ಪ್ರತಿದೂರು ನೀಡಿ, ಅವರು ನಟನನ್ನು ಹಿಂಬಾಲಿಸಿ ಅನುಮತಿಯಿಲ್ಲದೇ ಚಿತ್ರೀಕರಣ ಮಾಡಿದ್ದಾರೆಂದು ತಿಳಿಸಿದ್ದ.

 ನಡುವೆ ಸಲ್ಮಾನ್ ಸಮೀಪವರ್ತಿ ಮೂಲಗಳು ನಡೆದ ಘಟನೆಯನ್ನು ಬಹಿರಂಗ ಮಾಡಿದ್ದು, ಮುಂಬೈನ ಸ್ಟುಡಿಯೊನಲ್ಲಿ ಶೂಟಿಂಗ್ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಗೆ ಹಿಂತಿರುಗುವಾಗ ದೂರುದಾರ ವಾಹನದಟ್ಟಣೆಯ ರಸ್ತೆಯಲ್ಲಿ ನಟನನ್ನು ಹಿಂಬಾಲಿಸಿಕೊಂಡು ಬಂದಿದ್ದರೆಂದು ತಿಳಿಸಿವೆ. 

Recent Comments

Leave Comments

footer
Top