• 19 August 2018 05:11
Jai Kannada
Jai Kannada
Blog single photo
January 05, 2018

ಕೋಮುಭಾವನೆ ಕೆರಳಿಸುವವರ ವಿರುದ್ಧ ಕಠಿಣ ಕ್ರಮ: ಸಿದ್ದರಾಮಯ್ಯ 

ಬೆಂಗಳೂರು: ರಾಜ್ಯದಲ್ಲಿ ಕೋಮು ಭಾವನೆ ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.  

ಹಿಂದೂ ಕಾರ್ಯಕರ್ತರ ಹತ್ಯೆಯಿಂದ ಕರಾವಳಿ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೇಳಿಕೆ ಹೊರಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ  ಪಿಎಫ್‌ಐ ಸಂಘಟನೆ ಮತ್ತು ಅದರ ರಾಜಕೀಯ ದಳವಾದ ಎಸ್‌ಡಿಪಿಐ ಹೊಣೆಯೆಂದು ಬಿಜೆಪಿ ಆರೋಪಿಸಿದ್ದು, ಅವುಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಿದೆ.

ಅವರು ಯಾವುದೇ ಧರ್ಮಕ್ಕೆ ಸೇರಿರಲಿ, ಪಿಎಫ್‌ಐ, ಭಜರಂಗದಳ ಅಥವಾ ಮುತಾಲಿಕ್ ಸಂಘಟನೆಯಾಗಿರಲಿ ಕೋಮುಭಾವನೆ ಕೆರಳಿಸುವ, ಕೋಮು ಹಿಂಸಾಚಾರಕ್ಕೆ ಎಡೆಮಾಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 ಇತ್ತೀಚಿನ ಘಟನೆಯಲ್ಲಿ ಭಜರಂಗದಳದ ಜತೆ ನಂಟು ಹೊಂದಿದ್ದ 28 ವರ್ಷದ ದೀಪಕ್ ರಾವ್ ಎಂಬವನನ್ನು ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಇದರಿಂದ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು.
 

Recent Comments

Leave Comments

footer
Top