• 19 April 2019 20:00
Jai Kannada
Jai Kannada
Blog single photo
April 15, 2019

ಹಿಟ್ ಆ್ಯಂಡ್ ರನ್ ಕೇಸ್ : ಮುಖ್ಯ ಪೊಲೀಸ್ ಪೇದೆ ಸಾವು 

ಕುಂದಾಪುರ: ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಪೊಲೀಸ್ ಮುಖ್ಯ ಪೇದೆ ಸೋಮವಾರ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾರೆ. ಬ್ರಹ್ಮಾವರದ ಮಾಬುಕಳ ಸೇತುವೆಯಲ್ಲಿ ಭಾನುವಾರ ಸಂಜೆ ಅಪರಿಚಿತ ವಾಹನವೊಂದು ಅವರ ಬೈಕಿಗೆ ಡಿಕ್ಕಿಹೊಡೆದಿತ್ತು. ಡಿಕ್ಕಿ ಹೊಡೆದ ಬಳಿಕ ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದ.

ತಲ್ಲೂರು ಉಪ್ಪಿನಕುದ್ರು ನಿವಾಸಿ ಚಂದ್ರಶೇಖರ್ (43) ಮೃತಪಟ್ಟ ವ್ಯಕ್ತಿ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕೆಲಸ ಮಾಡುತ್ತಿದ್ದರು.  ಚಂದ್ರಶೇಖರ್ ಗಂಭೀರವಾಗಿ ಗಾಯಗೊಂಡ ಬಳಿಕ ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

 ಉಡುಪಿಯಲ್ಲಿ ಕೆಲವು ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ಅಪರಿಚಿತ ವಾಹನ ಅವರಿಗೆ ಹಿಂಬದಿಯಿಂದ ಡಿಕ್ಕಿಹೊಡೆದಿತ್ತು. ರಸ್ತೆ ವಿಭಜಕಕ್ಕೆ ಬೈಕ್ ಅಪ್ಪಳಿಸಿದ್ದರಿಂದ ಅವರ ತಲೆ ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿತ್ತು. ಅಪಘಾತದ ಬಳಿಕ ಸುಮಾರು 10 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಚಂದ್ರಶೇಖರ್ ಅವರನ್ನು  ಚಂದ್ರಶೇಖರ್ ತಲೆಗೆ ಮತ್ತು ಹೃದಯಕ್ಕೆ ಗಾಯಗಳಾಗಿತ್ತು. ಅವರ ಹೃದಯ ಬಡಿತವಿದ್ದರೂ ಅವರು ಬದುಕುಳಿಯುವ ಬಗ್ಗೆ ವೈದ್ಯರು ಸಂಶಯ ವ್ಯಕ್ತಪಡಿಸಿದ್ದರು. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Recent Comments

Leave Comments

footer
Top