• 19 April 2019 20:39
Jai Kannada
Jai Kannada
Blog single photo
April 15, 2019

ವಿಶ್ವಕಪ್ 2019ರ ತಂಡ ಪ್ರಕಟ, ಕಾರ್ತಿಕ್‌ಗೆ ಸ್ಥಾನ, ಪಂತ್ ಔಟ್ 

ಮುಂಬೈ: ಐಸಿಸಿ ವಿಶ್ವಕಪ್ 2019ರಲ್ಲಿ ಆಡಲಿರುವ ಭಾರತ ತಂಡವನ್ನು ಮುಂಬೈನಲ್ಲಿ ಪ್ರಕಟಿಸಲಾಗಿದ್ದು, ಈ ಪಂದ್ಯಾವಳಿ ಮೇ 30ರಿಂದ ಯುಕೆಯಲ್ಲಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ತಂಡದ ಆಯ್ಕೆಯಲ್ಲಿ ಅಷ್ಟೊಂದು ಅಚ್ಚರಿಯ ಬೆಳವಣಿಗೆ ಏನು ಉಂಟಾಗಿಲ್ಲ.

ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಸೇರಿಸಿರುವುದು ಗಮನಾರ್ಹ ಅಂಶವಾಗಿದ್ದು, ರಿಶಬ್ ಪಂತ್ ಅವರನ್ನು ಕೈಬಿಡಲಾಗಿದೆ. ಅಂಬಾಟಿ ನಾಯ್ಡು ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕಾರ್ತಿಕ್ ಅವರನ್ನು ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಅವರನ್ನು ಬದಿಗಿರಿಸಿ 33 ವರ್ಷದ ಕಾರ್ತಿಕ್ ಅವರಿಗೆ ಸ್ಥಾನ ನೀಡಲಾಗಿದೆ.

ಧೋನಿ ಗಾಯಗೊಂಡರೆ ಮಾತ್ರ ಎರಡನೇ ವಿಕೆಟ್ ಕೀಪರ್ ಆಡಲಿಳಿಯುತ್ತಾರೆ. ದೊಡ್ಡ ಪಂದ್ಯಗಳಲ್ಲಿ ಕಾರ್ತಿಕ್ ಅನುಭವ ಪಡೆದಿರುವುದರಿಂದ ಅವರಿಗೆ ಸ್ಥಾನ ನೀಡಿದ್ದೇವೆ ಎಂದು ತಂಡವನ್ನು ಪ್ರಕಟಿಸಿದ ಆಯ್ಕೆದಾರರ ಅಧ್ಯಕ್ಷ ಪ್ರಸಾದ್ ತಿಳಿಸಿದ್ದಾರೆ. ತಮಿಳುನಾಡು ಆಲ್ ರೌಂಡರ್ ವಿಜಯಶಂಕರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 
 ತಂಡದ ಪಟ್ಟಿ ಕೆಳಕಂಡಂತಿದೆ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ವಿಜಯಶಂಕರ್, ಧೋನಿ( ವಿಕೆಟ್ ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಮೊಹ್ಮದ್ ಶಮಿ 

Recent Comments

Leave Comments

footer
Top