• 19 April 2019 20:00
Jai Kannada
Jai Kannada
Blog single photo
April 15, 2019

ಗೆಳತಿಯನ್ನು ಕೊಂದು ಸೂಟ್‌ಕೇಸಿನಲ್ಲಿ ದೇಹ ತುರುಕಿ ಚರಂಡಿಗೆ ಎಸೆದ!

  ಹೈದರಾಬಾದ್: 25 ವರ್ಷದ ಯುವತಿಯನ್ನು ಅವಳ ಗೆಳೆಯನೇ ಕತ್ತು ಹಿಸುಕಿ ಕೊಂದು ಸೂಟ್‌ಕೇಸಿನಲ್ಲಿ ಅವಳ ದೇಹವನ್ನು ತುರುಕಿ ನಗರದ ಚರಂಡಿಯಲ್ಲಿ ಬಿಸಾಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಆರೋಪಿ ಸುನಿಲ್ ಕುಮಾರ್ ನಗರ ಮೂಲದ ಕಂಪನಿಯೊಂದರಲ್ಲಿ ಸ್ಟ್ರಕ್ಚರಲ್ ಎಂಜಿನಿಯರ್ ಆಗಿದ್ದು, ಯುವತಿ ಮದುವೆಯಾಗುವಂತೆ ಅವನಿಗೆ ಬಲವಂತ ಮಾಡಿದ್ದರಿಂದ ಬೇಸತ್ತು ಈ ದುಷ್ಕೃತ್ಯವೆಸಗಿದ್ದಾನೆ. ಯುವತಿ ಕೂಡ ಟಿಸಿಎಸ್ ಸಿನರ್ದಿ ಪಾರ್ಕ್ ಸಂಸ್ಥೆಯಲ್ಲಿ ಸಿಸ್ಟಮ್ ಎಂಜಿನಿಯರ್ ಹುದ್ದೆಯಲ್ಲಿದ್ದಳು.

.ಕಳೆದ ಏಪ್ರಿಲ್ 7ರಿಂದ ಯುವತಿ ನಾಪತ್ತೆಯಾಗಿದ್ದು, ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಕುಟುಂಬಕ್ಕೆ ಯುವತಿಯ ಗೆಳೆಯನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಅಂತಿಮವಾಗಿ ಯುವತಿಯ ಕರೆ ವಿವರಗಳನ್ನು ಬಳಸಿಕೊಂಡು ಪ್ರಕರಣವನ್ನು ಭೇದಿಸಿ, ಸುನಿಲ್‌ನನ್ನು ಶನಿವಾರ ರಾತ್ರಿ ಬಂಧಿಸಿದರು. 
ಹತ್ಯೆ ಮಾಡಿದ್ದು ಹೇಗೆ:
ಕಳೆದ ಫೆಬ್ರವರಿಯಲ್ಲಿ ಯುವತಿಯ ಒತ್ತಾಯದಿಂದ ಅವಳ ಕುಟುಂಬಕ್ಕೆ ತನಗೆ ಮಸ್ಕಾಟ್‌ನಲ್ಲಿ ಉದ್ಯೋಗ ಸಿಕ್ಕಿರುವುದಾಗಿ ಯುವತಿಗೆ ಕೂಡ ಸಂದರ್ಶನಕ್ಕೆ ವ್ಯವಸ್ಥೆ ಮಾಡಿರುವುದಾಗಿ ಹೇಳಿ ಆರ್‌ಜಿಐ ವಿಮಾನನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದ. ಬಳಿಕ ಫ್ಲೈಟ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಏರ್‌ಪೋರ್ಟ್ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದ,

ಲಾಡ್ಜ್‌ನಲ್ಲಿ ಕೂಡ ಯುವತಿ ಮದುವೆಯ ವಿಷಯ ಪ್ರಸ್ತಾಪ ಮಾಡಿದಾಗ ಅವರಿಬ್ಬರ ನಡುವೆ ಜಗಳವಾಗಿತ್ತು. ಸುನಿಲ್ ಸಿಟ್ಟಿನಿಂದ ಅವಳ ಕತ್ತುಹಿಸುಕಿ ಸೂಟ್‌ಕೇಸಿನಲ್ಲಿ ಅವಳ ದೇಹ ತುರುಕಿ ಸೂರಾರಾಮ್‌ಗೆ ತೆರಳಿ ಚರಂಡಿಯಲ್ಲಿ ಸೂಟ್ ಕೇಸ್ ಎಸೆದಿದ್ದ. ಏಪ್ರಿಲ್ 7 ರಂದು ಅವಳು ಬರುತ್ತಾಳೆಂದು ಸುನಿಲ್ ತಿಳಿಸಿದ್ದ. ಆದರೆ ಆ ದಿನಾಂಕದಲ್ಲಿ ಬರದಿದ್ದರಿಂದ ಪೊಲೀಸರಿಗೆ ನಾಪತ್ತೆ ದೂರನ್ನು ಯುವತಿಯ ಕುಟುಂಬ ನೀಡಿತ್ತು.

Recent Comments

Leave Comments

footer
Top