• 19 November 2018 06:33
Jai Kannada
Jai Kannada
Blog single photo
January 04, 2018

ದೀಪಕ್ ಹತ್ಯೆಗೆ ಪ್ರಭಾವಿಗಳ ಹಣಕಾಸು ನೆರವು 

ಮಂಗಳೂರು: ದೀಪಕ್ ಅವರ ಬರ್ಬರ ಹತ್ಯೆಯಿಂದ ಕರಾವಳಿ ಬೂದಿಮುಚ್ಚಿದ ಕೆಂಡದಂತಿದೆ. ಈ ನಡುವೆ ದೀಪಕ್ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ. ದೀಪಕ್ ಹತ್ಯೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದಿಂದ ಪ್ರಭಾವಿಗಳು ಹಣಕಾಸು ನೆರವು ಒದಗಿಸಿದ್ದಾರೆಂಬ ಸುದ್ದಿ ಲಭ್ಯವಾಗಿದೆ.

 ಉದ್ದೇಶಪೂರ್ವಕವಾಗಿ ಯೋಜಿತ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.  ದೀಪಕ್ ಹತ್ಯೆ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು,  ನವಾಜ್  ಮತ್ತು ರಿಜ್ವಾನ್ ಮೇಲೆ ಕೇಸ್‌ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ದೀಪಕ್ ಅಂತ್ಯಕ್ರಿಯೆಗೆ ಸಾವಿರಾರು ಮಂದಿ ಕಂಬನಿ ಸುರಿಸಿದರು. ದೀಪಕ್ ಮರಣೋತ್ತರ ಪರೀಕ್ಷೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಡೆಯಿತು.  ದೀಪಕ್ ತಾಯಿ ದುಃಖದ ಕಟ್ಟೆಯೊಡೆದಿತ್ತು. ವಿದೇಶಕ್ಕೆ ಕೆಲಸಕ್ಕಾಗಿ ಹೋಗುವುದಾಗಿ ಹೇಳಿದ್ದ.

ಆದರೆ ನಾನೇ ತಡೆದಿದ್ದೆ. ಅವನು ವಿದೇಶಕ್ಕೆ ಹೋಗಿದ್ದರೆ ಬದುಕುಳಿಯುತ್ತಿದ್ದ ಅವನ ತಾಯಿ ದುಃಖ ತೋಡಿಕೊಂಡರು.
ಏತನ್ಮಧ್ಯೆ ರಾಜ್ಯಸರ್ಕಾರ ದೀಪಕ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. 

Recent Comments

Leave Comments

footer
Top