• 19 April 2019 20:52
Jai Kannada
Jai Kannada
Blog single photo
April 15, 2019

ಮುಗ್ಧ ಜನರನ್ನು ಹತ್ಯೆ ಮಾಡಿದ ರೀತಿ ನಾನು ಮಾಡಿಲ್ಲ: ಕುಮಾರಸ್ವಾಮಿ

ಬೆಂಗಳೂರು:  ಗುಜರಾತಿನಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ಸಂಭವಿಸಿದ ಗಲಭೆಯಲ್ಲಿ ಒಂದು ಕೋಮಿನ ಜನರನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿತ್ತು.ಈ ಕುರಿತ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿರ್ದೋಷಿ ಎಂದು ಕೋರ್ಟ್ ತೀರ್ಪುನೀಡಿದೆ. ಒಂದು ಕೋಮಿನ ಜನರ ಆಕ್ರೋಶಕ್ಕೆ ಇನ್ನೊಂದು ಕೋಮಿನ ಜನರು ಬಲಿಯಾಗಿದ್ದರು.

ಆದರೆ ಈ ವಿಷಯವನ್ನು ಮತ್ತೆ ವಿರೋಧ ಪಕ್ಷಗಳು ಕೆಣಕುತ್ತಿವೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಮುಗ್ಧ ಜನರನ್ನು ಹತ್ಯೆ ಮಾಡಿದ ರೀತಿಯಲ್ಲಿ ನಾನು ಮಾಡಿಲ್ಲ. ಅವರಿಂದ ನಾನು ಏನೂ ಕಲಿಯಬೇಕಾಗಿಲ್ಲ ಎಂದು ಕುಮಾರಸ್ವಾಮಿ ಅಂಬೇಡ್ಕರ್ 128ನೇ ಜನ್ಮದಿನಾಚರಣೆ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡುತ್ತಾ ತಿಳಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ಆದಾಯ ತೆರಿಗೆ ದಾಳಿಗಳಾದಾಗ,ತಾವು ಅದಕ್ಕೆ ಹೆದರುವುದಿಲ್ಲ ಎಂದು ಪ್ರಶ್ನೆಯನ್ನು ತಳ್ಳಿಹಾಕಿದರು.
ಜೆಡಿಎಸ್ ಅಧ್ಯಕ್ಷ ದೇವೇಗೌಡರು ಯಾರದೋ ಮನೆಗೆ ಭೋಜನಕ್ಕೆ ಹೋಗಿದ್ದರೆ, ಆ ಮನೆಯವರ ಮೇಲೆ ಐಟಿ ರೇಡ್ ಮಾಡುತ್ತಾರೆ ಎಂದು ಟೀಕಿಸಿ ಇದು ಯಾವ ರೀತಿಯ ಸರ್ಕಾರ ಎಂದು ಟೀಕಿಸಿದರು.
 

Recent Comments

Leave Comments

footer
Top