• 19 April 2019 20:00
Jai Kannada
Jai Kannada
Blog single photo
April 15, 2019

ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಫೂಡಿ ನಿಖಿಲ್ ಪೈ

ಮಂಗಳೂರು: '3 ಹಂಗ್ರಿ ಮೆನ್' ಖ್ಯಾತಿಯ, ಆಹಾರದ ಮಾದರಿಗಳನ್ನು ರಿವ್ಯೂ ಮಾಡುವ ಫೂಡಿ ನಿಖಿಲ್ ಪೈ ಏಪ್ರಿಲ್ 13ರಂದು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಸಂಭವಿಸಿದೆ. ಅವರಿಗೆ 28 ವರ್ಷ ವಯಸ್ಸಾಗಿತ್ತು.

ಇಲಿ ಪಾಷಾಣ ಸೇವಿಸಿ ನಿಖಿಲ್ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವಿಪರೀತದ ಕ್ರಮವನ್ನು ನಿಖಿಲ್ ತೆಗೆದುಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ. 

ಶನಿವಾರ ಅವನ ತಾಯಿಯ ಜತೆ ಜಗಳವಾಡಿದ್ದ ನಿಖಿಲ್ ಬಳಿಕ ಮನೆ ಬಿಟ್ಟು ಹೋಗಿದ್ದನು. ಅವನು ವಾಪಸು ಬರದಿದ್ದಾಗ, ಅವನ ಕುಟುಂಬ ಭಾನುವಾರ ಬೆಳಿಗ್ಗೆ ನಾಪತ್ತೆಯ ದೂರನ್ನು ನೀಡಿತ್ತು.ಪೊಲೀಸರು ಶೋಧ ನಡೆಸಿದಾಗ ನಿಖಿಲ್ ದೇಹವು ಭಾನುವಾರ ಪಾಲೆಮಾರ್ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತನ್ನ ಸ್ನೇಹಿತ ಕೋಲಿನ್ ಜತೆ 3 ಹಂಗ್ರಿ ಮೆನ್ ಸಹ ಸಂಸ್ಥಾಪಕನಾಗಿದ್ದ ನಿಖಿಲ್ ನಗರದ ರೆಸ್ಟೋರೆಂಟ್‌ಗಳ ರಿವ್ಯೂಗಳ ಮೂಲಕ ಫೂಡಿಗಳಿಂದ ಅತೀವ ಮೆಚ್ಚುಗೆ ಗಳಿಸಿದ್ದರು. ಅವರ ಸಾಹಸವು ಮಂಗಳೂರಿನ ಮೊದಲ ಆಹಾರ ರಿವ್ಯೂ ಬ್ಲಾಗ್ ಆಗಿತ್ತು.
3 ಹಂಗ್ರಿ ಮೆನ್ ಮಂಗಳೂರಿನ ಆಹಾರ ಮತ್ತು ಪ್ರವಾಸ ಕುರಿತಾದ ರಾಷ್ಟ್ರೀಯ ಟವಿ ಕಾರ್ಯಕ್ರಮಗಳಲ್ಲಿ ಕಂಡುಬಂದಿತ್ತು.

ಈ ಗುಂಪು ಆಹಾರ ಸೇವಿಸುವ ಸ್ಪರ್ಧೆಗಳ ಆಯೋಜನೆಯಲ್ಲಿ ಹೆಸರುವಾಸಿಯಾಗಿದ್ದು, ಯುವಕರಲ್ಲಿ ವಿಪುಲ ಜನಪ್ರಿಯತೆ ಗಳಿಸಿತ್ತು. ಉತ್ಕಟ ಫೂಡಿ ಆಗಿರುವುದಲ್ಲದೇ ಹವ್ಯಾಸಿ ಕಾರ್ಟೂನಿಸ್ಟ್ ಕೂಡ ಆಗಿದ್ದರು. 2 ವರ್ಷಗಳ ಹಿಂದೆ ಅವರ ತಂದೆಯ ನಿಧನದ ಬಳಿಕ ಬೈಕಂಪಾಡಿಯಲ್ಲಿ ದೀಪಕ್ ಫ್ಯೂಲ್ ಪಂಪ್ ನಿರ್ವಹಣೆ ವಹಿಸಿಕೊಂಡಿದ್ದರು. ನಿಖಿಲ್ ಪತ್ನಿ, ಸೋದರಿ ಮತ್ತು ತಾಯಿಯನ್ನು ಅಗಲಿದ್ದಾರೆ.
 

Recent Comments

Leave Comments

footer
Top