• 19 April 2019 20:00
Jai Kannada
Jai Kannada
Blog single photo
April 14, 2019

ಮೋದಿ ರ‌್ಯಾಲಿಯಿಂದ ವಾಪಸ್ ಬರುತ್ತಿದ್ದ ಬಸ್ಸಿನವರ ಮೇಲೆ ಹಲ್ಲೆ, ಕಲ್ಲು ತೂರಾಟ 

ಪ್ರಧಾನಿ ಮೋದಿ ಪ್ರಚಾರ ರ‌್ಯಾಲಿಯನ್ನು ಮುಗಿಸಿಕೊಂಡು ವಾಪಸ್ ಹೊರಟಿದ್ದ ಕಾರು ಮತ್ತು ಬಸ್ ಮೇಲೆ ಕುತ್ತಾರು ಮದನಿನಗರದ ಬಳಿ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದರಿಂದ ನಾಲ್ವರು ಗಾಯಗೊಂಡಿದ್ದಾರೆ. ಕುಂಪಲ ನಿವಾಸಿಗಳಾದ ಸುಜನ್, ನಾಹುಶ್, ಮದನಿನಗರ ನಿವಾಸಿಗಳಾದ ಮಹ್ಮದ್ ಅಜ್ಮಲ್, ಶಂಷೀರ್ ಗಾಯಗೊಂಡವರು.

ಮದನಿನಗರ ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಇನ್ನೊಂದು ಕಾರಿನಲ್ಲಿದ್ದ ತಂಡವು ಅಪಘಾತವಾಗಿದ್ದ ಕಾರು ಚಾಲಕನ ಮೇಲೆ ಹಲ್ಲೆ ಮಾಡಿತ್ತು. ಮೋದಿ ರ‌್ಯಾಲಿ ಮುಗಿಸಿಕೊಂಡು ವಾಪಸಾಗುತ್ತಿದ್ದ ಬಸ್ಸಿನಲ್ಲಿದ್ದ ಯುವಕರು ಬಸ್ಸನ್ನು ನಿಲ್ಲಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿದಾಗ ಎರಡೂ ತಂಡಗಳ ನಡುವೆ ಬಡಿದಾಟ ನಡೆದು ಕಾರಿನಲ್ಲಿದ್ದ ತಂಡವು ಬಸ್ಸಿನೊಳಗಿದ್ದ ಮಹಿಳೆಯರ ಮೇಲೂ ಹಲ್ಲೆ ಮಾಡಿತಲ್ಲದೇ ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದರಿಂದ ಗಾಜು ಪುಡಿಪುಡಿಯಾಗಿದೆ.

ಘಟನೆಯಿಂದ ನಾಲ್ವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಕೃತ್ಯವನ್ನು ಖಂಡಿಸಿ 400ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕೊಣಾಜೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ ಮೇಲೆ ಇಬ್ಬರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಇನ್ನಿತರರು ಪರಾರಿಯಾಗಿದ್ದಾರೆ. 

Recent Comments

Leave Comments

footer
Top