• 19 April 2019 20:41
Jai Kannada
Jai Kannada
Blog single photo
April 14, 2019

ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದ ಟ್ರಕ್: ಕ್ಲೀನರ್ ಸಾವು, ಚಾಲಕನಿಗೆ ಗಂಭೀರ ಗಾಯ 

ಬೆಂಗಳೂರು : ಯಶವಂತಪುರ ಫ್ಲೈಓವರ್‌ನಿಂದ ಟ್ರಕ್ ಕೆಳಕ್ಕೆ ಬಿದ್ದು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕನಿಗೆ ಗಂಭೀರ ಗಾಯವಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಪುಣೆಯಿಂದ ಅಣಬೆ ತುಂಬಿಸಿಕೊಂಡು ಬೆಂಗಳೂರಿಗೆ ಬಂದಿದ್ದ ಟ್ರಕ್ ಈ ರೀತಿ ಅಪಘಾತಕ್ಕೀಡಾಗಿದೆ

ಫ್ಲೈ‍ಓವರ್‌ನಲ್ಲಿ ಉದ್ದದ ತಿರುವು ಇರುವುದರಿಂದ ಟ್ರಕ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಫ್ಲೈಓವರ್ ಕೆಳಗೆ ಉರುಳಿಬಿದ್ದಿದೆಯೆಂದು ಗೊತ್ತಾಗಿದೆ. ಕೆಲವು ತಿಂಗಳ ಹಿಂದೆ ಕೋಳಿಗಳನ್ನು ತುಂಬಿದ್ದ ಟೆಂಪೊವೊಂದು ಇದೇ ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದಿದ್ದು, ಈ ಸ್ಥಳದಲ್ಲಿ ಉದ್ದದ ತಿರುವು ಇರುವುದರಿಂದ ಪದೇ ಪದೇ ಅಪಘಾತ ಸಂಭವಿಸುತ್ತಿದೆಯೆಂದು ಹೇಳಲಾಗುತ್ತಿದೆ. 

Recent Comments

Leave Comments

footer
Top