• 19 April 2019 20:22
Jai Kannada
Jai Kannada
Blog single photo
April 13, 2019

ಮೊದಲು  ತಮ್ಮ ಮನೆ ತೊಳೆದುಕೊಳ್ಳಲಿ: ಡಿಕೆಶಿ ವಿರುದ್ಧ ಎಂಬಿ ಪಾಟೀಲ್ ಗರಂ 

 ಕಾಂಗ್ರೆಸ್‌ ಪಕ್ಷದಲ್ಲಿ ಪ್ರತ್ಯೇಕ  ಲಿಂಗಾಯತ ಧರ್ಮದ ವಿವಾದ ಮತ್ತೆ ಭುಗಿಲೆದ್ದಿದೆ. ಡಿ.ಕೆ. ಶಿವಕುಮಾರ್ ಅವರು ಪದೇ ಪದೇ ಪ್ರತ್ಯೇಕ ಲಿಂಗಾಯತ ಧರ್ಮದ ವಿವಾದದ ಬಗ್ಗೆ  ಪಕ್ಷದ ಪರವಾಗಿ ಕ್ಷಮೆ ಕೇಳುತ್ತಿದ್ದಾರೆ. ಕ್ಷಮೆ ಕೇಳುವುದಕ್ಕೆ ಅವರು ಯಾರು.
ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರವನ್ನು ಅವರು ಬಲಪಡಿಸಲಿ.

ಅವನೇನು ಮೇಲಿಂದ ಬಿದ್ದಿದ್ದಾನಾ,  ಮೊದಲು ಅವರು ತಮ್ಮ ಮನೆಯನ್ನು ತೊಳೆದುಕೊಳ್ಳಲಿ, ಇದು ಮೊದಲನೇ ಬಾರಿಯಲ್ಲ, ಇದು ಎರಡನೇ ಬಾರಿ ಕ್ಷಮೆ ಕೇಳುತ್ತಿರುವುದು ಎಂದು ಎಂ.ಬಿ. ಪಾಟೀಲ್ ಗರಂ ಆಗಿದ್ದಾರೆ. ಉತ್ತರಕರ್ನಾಟಕದಲ್ಲಿ ನಮ್ಮ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

 ಈ ನಡುವೆ ಡಿಕೆಶಿ ಎಂ.ಬಿ. ಪಾಟೀಲ್ ಅವರ ಹೇಳಿಕೆಗೆ ಮೃದುವಾಗಿ ಸ್ಪಂದಿಸಿ, ಅವರು ದೊಡ್ಡವರು, ಏನು ಬೇಕಾದರೂ ಮಾತನಾಡಲಿ, ನಾವು ಹಳ್ಳಿಯಿಂದ ಬಂದ ಕಾರ್ಯಕರ್ತರು ಎಂದು ಹೇಳಿದರು. ಏನೋ ಹಳ್ಳಿ, ಪಳ್ಳಿಯಲ್ಲಿ ನನಗೆ ಓಟು ಹಾಕುತ್ತಾರೆ. ನನಗೆ ಯಾರನ್ನೂ ಗೆಲ್ಲಿಸುವ ಶಕ್ತಿಯಿಲ್ಲ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

Recent Comments

Leave Comments

footer
Top