• 19 November 2018 07:21
Jai Kannada
Jai Kannada
Blog single photo
January 04, 2018

ಮತ್ತೆ ಬೆಂಗಳೂರಿಗೆ ತಟ್ಟಿದ ಹಕ್ಕಿಜ್ವರ 

ಬೆಂಗಳೂರು: ಹಕ್ಕಿ ಜ್ವರದ ಬಾಧೆ ಮತ್ತೆ ಬೆಂಗಳೂರಿಗೆ ತಟ್ಟಿದೆ. ಕಳೆದ ಡಿ. 29ರಂದು ದಾಸರಹಳ್ಳಿಯ ಭುವನೇಶ್ವರನಗರದಲ್ಲಿನ ಕೋಳಿ ಮಾರಾಟದ ಅಂಗಡಿಯೊಂದರಲ್ಲಿ ಎಚ್‌5ಎನ್‍1 ವೈರಸ್ ಸೋಂಕಿನಿಂದ 8 ಕೋಳಿಗಳು ಸತ್ತಿದ್ದವು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಪ್ರತಿಬಂಧಕ ಕ್ರಮ ಕೈಗೊಳ್ಳಲು ಜಾಗೃತಿ ಅಭಿಯಾನವನ್ನು ಆರಂಭಿಸಿತು. ಕಳೆದ ಡಿ. 28ರಂದು ತಮಿಳುನಾಡಿನಿಂದ ಕೋಳಿಗಳನ್ನು ಪೂರೈಸಲಾಗಿತ್ತು.

ಬಿಎಂಪಿಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ಕೋಳಿಗಳು ಎಚ್5ಎನ್‌1 ವೈರಸ್ ಅಥವಾ ಏವಿಯನ್ ಫ್ಲೂನಿಂದ ಸತ್ತಿವೆ. ಭೂಪಾಲ್‌ನ ಹೈ ಸೆಕ್ಯೂರಿಟಿ ಎನಿಮಲ್ ಡಿಸೀಸ್ ರಾಷ್ಟ್ರೀಯ ಸಂಸ್ಥೆಯಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಂಗಳವಾರ ಇದರ ಫಲಿತಾಂಶ ಬಂದ ನಂತರ,ಪಾಲಿಕೆ ಜಾಗೃತಿ ಅಭಿಯಾನ ಕೈಗೊಂಡಿತ್ತು.

ಹಕ್ಕಿ ಜ್ವರವು ಅತೀ ಸೋಂಕಿನ ತೀವ್ರ ಉಸಿರಾಟದ ಕಾಯಿಲೆಯಾಗಿದ್ದು, ಏವಿಯನ್ ಇನ್‌ಫ್ಲುಯೆಂಜಾ ಎಂದು ಕರೆಯಲಾಗುತ್ತದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಪ್ರಕಟಣೆ ನೀಡಿ, ಭುವನೇಶ್ವರಿನಗರದ 1-10 ಕಿಮೀ ವಲಯವು ಕಣ್ಗಾವಲು ವಲಯ ಮತ್ತು ಚಿಕನ್ ಕೇಂದ್ರದ ಸುತ್ತ 1 ಕಿಮೀವರೆಗೆ ಸೋಂಕಿತ ವಲಯ ಎಂದು ಘೋಷಿಸಿತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಾನವರಲ್ಲಿ ಹಕ್ಕಿಜ್ವರ ಪ್ರಕರಣಗಳು ಕಡಿಮೆಯಿದ್ದರೂ, ಅದು ತಟ್ಟಿದರೆ, ಸಾವಿನ ಪ್ರಮಾಣ ಶೇ. 60ಕ್ಕಿಂತ ಹೆಚ್ಚಾಗಿರುತ್ತದೆ.. ಬುಧವಾರ ಬಿಬಿಎಂಪಿ 50ಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ ಮಾಡಿ ಹೆಬ್ಬಾಳ ಬಳಿ ಹೂತಿದೆ. ಯಲಹಂಕ ವಲಯದಲ್ಲಿ ಆರೋಗ್ಯ ಇಲಾಖೆ ಅನೇಕ ಕೋಳಿ ಅಂಗಡಿಗಳನ್ನು ಮುಚ್ಚಿದೆ.

Recent Comments

Leave Comments

footer
Top