• 19 April 2019 20:00
Jai Kannada
Jai Kannada
Blog single photo
April 12, 2019

ಇಂಡೋನೇಶಿಯಾದಲ್ಲಿ  7 ರಷ್ಟು ಪ್ರಮಾಣದ ಭೂಕಂಪ : ಸುನಾಮಿ ಮುನ್ಸೂಚನೆ 

 ಸಿಂಗಾಪುರ: ಇಂಡೋನೇಶಿಯಾ ದ್ವೀಪ ಸುಲವೇಸಿಯಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 7 ರಷ್ಟು ಪ್ರಮಾಣದ ಭೂಕಂಪ ಅಪ್ಪಳಿಸಿದೆ ಎಂದು ಅಮೆರಿಕ ಬೌಗೋಳಿಕ ಸಮೀಕ್ಷೆ ತಿಳಿಸಿದೆ. ಭೂಕಂಪದಿಂದ ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಸಾವು, ನೋವಿನ ವರದಿಯಾಗಿಲ್ಲ.

ಗೊರೊಂಟೊಲಾ ಪ್ರಾಂತ್ಯದ ದಕ್ಷಿಣಕ್ಕೆ 280 ಕಿಮೀ ದೂರದಲ್ಲಿ 43 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು. ಭೂಕಂಪದಿಂದಾಗಿ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಕ್ಕೆ ಓಡಿದರು.

ಪಾಲು ನಗರದಲ್ಲಿ ಕಳೆದ ವರ್ಷ ಅಪ್ಪಳಿಸಿದ 7.5 ಪ್ರಮಾಣದ ಭೂಕಂಪ-ಸುನಾಮಿಯಿಂದಾಗಿ ಸುಮಾರು 4600 ಜನರು ಸಾವನ್ನಪ್ಪಿದ್ದರು.  

Recent Comments

Leave Comments

footer
Top