• 19 April 2019 20:43
Jai Kannada
Jai Kannada
Blog single photo
April 12, 2019

ತ್ರಿಪುರಾದಲ್ಲಿ 81.8% ಅತ್ಯಧಿಕ ಮತದಾನ, ಬಿಹಾರದಲ್ಲಿ 50% ಅತೀ ಕಡಿಮೆ 

ನವದೆಹಲಿ: 20 ರಾಜ್ಯಗಳಲ್ಲಿ ಹರಡಿರುವ 91 ಲೋಕಸಭೆ ಕ್ಷೇತ್ರಗಳಲ್ಲಿ ಗುರುವಾರ ನಡೆದ ಮತದಾನವು ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ಸಂಭವಿಸಿದ್ದು ಬಿಟ್ಟರೆ ಉಳಿದಂತೆ ಶಾಂತಿಯುತವಾಗಿತ್ತು ಎಂದು ಚುನಾವಣೆ ಆಯೋಗ ತಿಳಿಸಿದೆ.

ಚುನಾವಣೆ ಆಯೋಗದ ಅಧಿಕಾರಿಗಳ ಪ್ರಕಾರ, ತ್ರಿಪುರಾದಲ್ಲಿ ಮತದಾನದ ಅತ್ಯಧಿಕ ಶೇಕಡಾವಾರು ಪ್ರಮಾಣ(81.8%) ದಾಖಲಾಗಿದ್ದು ಪಶ್ಚಿಮಬಂಗಾಳದಲ್ಲಿ 81% ದಾಖಲಾಗಿದೆ.

ಬಿಹಾರದಲ್ಲಿ ಅತೀ ಕಡಿಮೆ ಮತದಾನವಾಗಿದ್ದು, ಶೇಕಡಾವಾರು ಪ್ರಮಾಣ ಶೇ. 50ರಷ್ಟಿದೆ. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಶೇ. 56ರಷ್ಟು ಮತದಾನವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೇಕಡ 70.67 ಮತದಾನ ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ಶೇ. 66 , ತೆಲಂಗಾಣ ಶೇ. 60, ಉತ್ತರಾಖಂಡ ಶೇ. 57. 85,
 ಜಮ್ಮು ಕಾಶ್ಮೀರದಲ್ಲಿ ಶೇ. 58, ಸಿಕ್ಕಿಂನಲ್ಲಿ ಶೇ. 69, ಮಿಜೋರಾಂನಲ್ಲಿ ಶೇ. 60 , ನಾಗಾಲ್ಯಾಂಡ್‌ನಲ್ಲಿ ಶೇ. 78, ಮಣಿಪುರದಲ್ಲಿ ಶೇ. 78.2 ಮತ್ತು ಅಸ್ಸಾಂನಲ್ಲಿ ಶೇ. 68ರಷ್ಟು ಮತದಾನವಾಗಿದೆ.

ಉತ್ತರಪ್ರದೇಶದಲ್ಲಿ ಶೇ. 63. 69 ಮತದಾರರು ಹಕ್ಕು ಚಲಾಯಿಸಿದರೆ, ಲಕ್ಷದ್ವೀಪದಲ್ಲಿ ಶೇ. 66, ಮೇಘಾಲಯದಲ್ಲಿ ಶೇ. 67. 16ರಷ್ಟು ಜನರು ಮತದಾನ ಮಾಡಿದ್ದಾರೆ. 

ಲೋಕಸಭೆ ಕ್ಷೇತ್ರಗಳಲ್ಲಿ ಮತದಾನವಾದ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಂಧ್ರ ಪ್ರದೇಶ (25), ತೆಲಂಗಾಣ (17), ಅರುಣಾಚಲ ಪ್ರದೇಶ (2), ಮೇಘಾಲಯ (2)   ಉತ್ತರಾಖಂಡ್ (5), ಮಿಜೋರಾಮ್ (1), ನಾಗಾಲ್ಯಾಂಡ್ (1), ಸಿಕ್ಕಿಂ (1), ಲಕ್ಷದ್ವೀಪ (1) ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1).
 

Recent Comments

Leave Comments

footer
Top