• 19 April 2019 20:46
Jai Kannada
Jai Kannada
Blog single photo
April 11, 2019

ಆರ್‌ಸಿಬಿ ತಂಡದ ಪುನಶ್ಚೇತನಕ್ಕೆ  ಡೇಲ್ ಸ್ಟೇನ್ ಸೇರಿಕೊಳ್ಳುತ್ತಾರಾ?

ಐಪಿಎಲ್‌ನ ಸತತ 6 ಪಂದ್ಯಗಳಲ್ಲಿ ಸೋತು ಸುಣ್ಣವಾಗಿ ಪಾಯಿಂಟ್ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಬೌಲಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಪುನಶ್ಚೇತನಕ್ಕೆ ಹತಾಶ ಸ್ಥಿತಿಯಲ್ಲಿ ಕಾಯುತ್ತಿದೆ. ಈಗಉಮೇಶ್ ಯಾದವ್, ಟಿಂ ಸೌಥಿ, ಗ್ರಾಂಡ್ ಹೋಮ್ ಮತ್ತು ಸ್ಟಾಯ್ನಿಸ್ ಬೌಲಿಂಗ್ ವಿಭಾಗದಲ್ಲಿದ್ದಾರೆ.

ಇನ್ಸ್ಟಾಗ್ರಾಂ ಇತ್ತೀಚಿನ ಬೆಳವಣಿಗೆಯಲ್ಲಿ ಆರ್ಸಿಬಿ  ಅಭಿಮಾನಿಗಳು ಜಗತ್ತಿನ ಅತ್ಯಂತ ಭಯಹುಟ್ಟಿಸುವ ಬೌಲರ್ ಡೇಲ್ ಸ್ಟೇಯ್ನ್ ವಿರಾಟ್ ಕೊಹ್ಲಿಯ ತಂಡಕ್ಕೆ ಸೇರಲು ಬರುತ್ತಿದ್ದಾರೆಂದು ನಂಬಿದ್ದಾರೆ. ಡೇಲ್ ಸ್ಟೇನ್ ತಮ್ಮ ಪಾಸ್ ಪೋರ್ಟ್ ಚಿತ್ರವನ್ನು ಕ್ರಮಬದ್ದಭಾರತ ವೀಸಾ ಜತೆ ಶೇರ್ ಮಾಡಿದ್ದು ಇದಕ್ಕೆ ಕಾರಣ.

ತಕ್ಷಣದಲ್ಲೇ ಟ್ವಿಟರ್‌ನಲ್ಲಿ ಡೇಲ್ ಸ್ಟೇನ್ ಆರ್‌ಸಿಬಿಗೆ ಪುನಶ್ಚೇತನ ನೀಡಲು ಭಾರತಕ್ಕೆ ಬರುತ್ತಿದ್ದಾರೆಂದೇ ಊಹಾಪೋಹಗಳನ್ನು ಹರಿಯಬಿಡಲಾಗುತ್ತಿದೆ. ಕೆಲವು ಫ್ಯಾನ್‌ಗಳು  ಸ್ಟೈನ್ ಆಸ್ಟ್ರೇಲಿಯನ್ ನಾಥನ್ ಕೌಲ್ಟರ್ ನೈಲ್ ಬದಲಿಗೆ ಆರ್‌ಸಿಬಿಗೆ ಸೇರಬಹುದು ಎಂದು ಭಾವಿಸಿದ್ದಾರೆ.

Recent Comments

Leave Comments

footer
Top