• 19 April 2019 20:05
Jai Kannada
Jai Kannada
Blog single photo
April 11, 2019

ಪ್ರವಾಸಿಗಳ ಮೋಜಿನಿಂದ ಕುಸಿದುಬಿದ್ದ ಸೇತುವೆ 

ಬೀಜಿಂಗ್: ಚೀನಾದಲ್ಲಿ ಸೇತುವೆ ಕುಸಿತದ ಇನ್ನೊಂದು ಪ್ರಕರಣದಲ್ಲಿ ಪ್ರವಾಸಿಗಳು ಸಾಗುತ್ತಿದ್ದ ಮರದ ಸೇತುವೆ ಕುಸಿದು ಎಲ್ಲರೂ ನೀರಿಗೆ ಬಿದ್ದ ಘಟನೆ ಸಂಭವಿಸಿದೆ. ಜಿಯಾಂಗ್ಸುನ ಸೂನಿಂಗ್ ಕೌಂಟಿಯ ಪ್ರವಾಸಿ ಸ್ಥಳದಲ್ಲಿ ಈ ಘಟನೆ ನಡೆದಿದೆ. ಚೀನಾದ ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಹತ್ತಾರು ಪ್ರವಾಸಿಗಳು ಸೇತುವೆ ಮೇಲೆ ನಿಂತು ಅದನ್ನು ಆಚೆ ಈಚೆ ಮೋಜಿಗಾಗಿ ತೂಗಾಡಿಸಿದ್ದರಿಂದ ಸೇತುವೆ ಕುಸಿದುಬಿದ್ದಿತ್ತು.

ಮರದ ಸಸ್ಪೆನ್‌ಷನ್ ಸೇತುವೆ ಈ ಪ್ರಕ್ರಿಯೆಯಿಂದ ತೂಕ ತಡೆಯಲಾಗದೆ ಕೊನೆಯಲ್ಲಿ ಕುಸಿದುಬಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದ ಬಳಕೆದಾರರು ಮಾತ್ರ ಸೇತುವೆಯನ್ನು ತೂಗಾಡಿಸಿದ ಜನರನ್ನು ನಿರ್ದಯವಾಗಿ ಟ್ರಾಲ್ ಮಾಡಿದ್ದಾರೆ.

 ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top